ಹರಿಹರ ತಾಲ್ಲೂಕು ಗಂಗನರಸಿಯ ಶ್ರೀ ಗೋಣಿ ಬಸವೇಶ್ವರ ಸ್ವಾಮಿ ಹೊರಮಠ, ಶ್ರೀ ಹನುಮಂತದೇವರ ಜೀರ್ಣೋದ್ಧಾರ ಸಮಿತಿಯಿಂದ ಇಂದು ಬೆನಕನ ಅಮಾವಾಸ್ಯೆ ವಿಶೇಷ ಪೂಜೆ ನಡೆಯಲಿದೆ. ಬೆಳಿಗ್ಗೆ 11 ಕ್ಕೆ ಶ್ರೀ ಗೋಣಿ ಬಸವೇಶ್ವರ, ನಾಗದೇವತಾ ಸ್ವಾಮಿಗಳಿಗೆ ವಿಶೇಷ ಪೂಜೆ, ಅಭಿಷೇಕ ಮತ್ತು ಮಹಾಮಂಗಳಾರತಿ ನಡೆಯುವುದು. ನಂತರ 11.30 ಕ್ಕೆ ಮಹಾ ಪ್ರಸಾದ ಸೇವೆಯನ್ನು ದಾವಣಗೆರೆ ವಿನೋಬನಗರದ ಸಿದ್ದೇಶ್ವರ ಎಲೆಕ್ಟ್ರಿಕಲ್ಸ್‌ನ ಡಿ. ಚಂದ್ರಪ್ಪ ಮತ್ತು ಸಹೋದರರು ಏರ್ಪಡಿಸಿದ್ದಾರೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಗೌಡ್ರ ಚನ್ನಬಸಪ್ಪ ತಿಳಿಸಿದ್ದಾರೆ.
December 24, 2024