ದಾವಣಗೆರೆ, ಸೆ.13- ಕಲ್ಪಶ್ರೀ ಇಂಟರ್‌ನ್ಯಾಷನಲ್ ವರ್ಲ್ಡ್ ಮ್ಯೂಸಿಕ್, ಡ್ಯಾನ್ಸ್, ಇನ್‌ಸ್ಟ್ರುಮೆಂಟ್ಸ್ ಅಕಾಡೆಮಿ ವತಿಯಿಂದ ಶ್ರೀ ಮಹಾರಾಜ ಕೃಷ್ಣದೇವರಾಯರ ಸಂಗೀತೋತ್ಸವದ ಅಂಗವಾಗಿ ಮುಂಬರುವ ಡಿಸೆಂಬರ್ ತಿಂಗಳಲ್ಲಿ ನಡೆಯುವ ಭಾವಗೀತೆ, ಜನಪದಗೀತೆ, ಚಿತ್ರಗೀತೆ, ವಚನಗಳು, ಲಾವಣಿ, ಕೋಲಾಟ, ವೀರಗಾಸೆ, ಡೋಲು ಕುಣಿತ, ಭರತ ನಾಟ್ಯ, ಶಾಸ್ತ್ರೀಯ ಸಂಗೀತ, ಕುಚುಪುಡಿ, ಮೋಹಿನಿಯಟ್ಟಂ ಸೇರಿ ಸಾಂಸ್ಕೃತಿಕ ಕಲೆಗಳ ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗೆ ಆಹ್ವಾನಿಸಲಾಗಿದೆ.
ಸ್ಪರ್ಧೆಗೆ ಭಾಗವಹಿಸುವವರು ಸೆ.15ರೊಳಗಾಗಿ ಹೆಸರು, ನೋಂದಾಯಿಸತಕ್ಕದ್ದು. ವಿವರಕ್ಕೆ 6363729546 ಗೆ ಸಂಪರ್ಕಿಸಬಹುದು ಎಂದು ಅಕಾಡೆಮಿಯ ಅಧ್ಯಕ್ಷ ಕೆ. ಅನಂತಶರ್ಮ ತಿಳಿಸಿದ್ದಾರೆ.