ಮಲೇಬೆನ್ನೂರಿನಲ್ಲಿ ಶಿಕ್ಷಣದ ಮಹತ್ವ ಸಾರಿದ ಸಾಕ್ಷರತಾ ಜಾಥಾ

ಮಲೇಬೆನ್ನೂರಿನಲ್ಲಿ ಶಿಕ್ಷಣದ ಮಹತ್ವ ಸಾರಿದ ಸಾಕ್ಷರತಾ ಜಾಥಾ

ಮಲೇಬೆನ್ನೂರು, ಸೆ. 12- ರಾಜ ರಾಜೇಶ್ವರಿ ವಿದ್ಯಾಸಂಸ್ಥೆ ವತಿಯಿಂದ  ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಕ್ಷರತಾ ಜಾಥಾ ಹಮ್ಮಿಕೊಳ್ಳಲಾಗಿತ್ತು. 

ಶಿಕ್ಷಣ ಮತ್ತು ಸಾಕ್ಷರತೆಯ ಮಹತ್ವ ಸಾರುವ ಬ್ಯಾನರ್, ಬಂಟಿಂಗ್ಸ್ ಹಾಗೂ ಕನ್ನಡ, ಆಂಗ್ಲ, ಹಿಂದಿ ವರ್ಣಮಾಲೆಯ ಅಕ್ಷರಗಳ ಪ್ಲೇ ಕಾರ್ಡ್ಸ್ ಹಿಡಿದ 5 ರಿಂದ 10 ನೇ ತರಗತಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕಾಲ್ನಡಿಗೆಯಲ್ಲಿ ಸಂಚರಿಸಿ, ಘೋಷಣೆ ಕೂಗಿ ಸಾಕ್ಷರತಾ ಗೀತೆ ಹಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. 

ಸಂಸ್ಥೆಯ ಕಾರ್ಯದರ್ಶಿ ಜಿ.ಬಿ. ಶಿವಾನಂದಪ್ಪ,  ಪ್ರಾಂಶುಪಾಲರಾದ ಶ್ರೀಮತಿ ಸುಜಾತ, ಮುಖ್ಯೋಪಾಧ್ಯಾಯರಾದ ಶಶಿಧರ್ ಎಸ್.ಶಿಗ್ಗಾಂವ್ಕರ್, ಗಂಗಾಧರ್ ಬಿ.ಎಲ್. ನಿಟ್ಟೂರ್, ಶಿಕ್ಷಕ ವೃಂದದ ಬೃಂದಾ, ರಾಜೇಶ್ವರಿ, ಕವಿತಾ ಕೊಮಾರನಹಳ್ಳಿ , ಕುಸುಮ,  ಭಾಗ್ಯ ಪ್ರಸಾದ್,  ಲಲಿತಮ್ಮ,  ಅನುರಾಧ, ಬಸಮ್ಮ, ಮುತ್ತಣ್ಣ, ರಾಜಣ್ಣ, ರಘು, ಚಂದ್ರು ಸೇರಿದಂತೆ ಇತರರು ಜಾಥಾದಲ್ಲಿ ಭಾಗವಹಿಸಿದ್ದರು.

error: Content is protected !!