ಸಂಗೊಳ್ಳಿ ರಾಯಣ್ಣನ ಶೌರ್ಯ, ದೇಶಭಕ್ತಿ ಇಂದಿಗೂ ಅಜರಾಮರ

ಸಂಗೊಳ್ಳಿ ರಾಯಣ್ಣನ ಶೌರ್ಯ,  ದೇಶಭಕ್ತಿ ಇಂದಿಗೂ ಅಜರಾಮರ

ರಾಣೇಬೆನ್ನೂರು ತಾ. ಕಜ್ಜರಿ ಗ್ರಾಮದಲ್ಲಿ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ

 ರಾಣೇಬೆನ್ನೂರು, ಸೆ.12- ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹೋರಾಟ, ಶೌರ್ಯ, ದೇಶಭಕ್ತಿ ಇಂದಿಗೂ ಅಜರಾಮರ. ದೇಶ ಮತ್ತು ನಾಡಿಗಾಗಿ  ಹೋರಾಟ ಮಾಡಿ, ಪ್ರಾಣ ತ್ಯಾಗ ಮಾಡಿದ ಅಪ್ರತಿಮ ವೀರ ಯೋಧ ಎಂದು ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ತಾಲೂಕಿನ ಕಜ್ಜರಿ ಗ್ರಾಮದಲ್ಲಿ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೇವಾ ಸಮಿತಿ ವತಿಯಿಂದ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಹಾಗೂ ಧರ್ಮಸಭೆ ಉದ್ಘಾಟಿಸಿ ಅವರು ಮಾತನಾಡಿದರು. 

ಕಿತ್ತೂರು ರಾಣಿ ಚೆನ್ನಮ್ಮನಿಗೆ ಬಲಗೈ ಬಂಟನಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಥಮ ಕನ್ನಡದ ವೀರ ಸೇನಾನಿ ಸಂಗೊಳ್ಳಿ ರಾಯಣ್ಣ, ಆತನ ಶೌರ್ಯ, ಪ್ರಾಮಾಣಿಕತೆ, ಬುದ್ಧಿ ಶಕ್ತಿಯನ್ನು ಯುವಕರು ಅನುಸರಿಸುವ ಮೂಲಕ ರಾಯಣ್ಣನ ಬಲಿದಾನಕ್ಕೆ ಗೌರವ ಸಮರ್ಪಣೆ ಮಾಡಬೇಕು ಎಂದರು.

ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ ತಿರುಕಪ್ಪ ಕಂಬಳಿ ಮಾತನಾಡಿ, ಸಂಗೊಳ್ಳಿ ರಾಯಣ್ಣನ ಚರಿತ್ರೆ ತಿಳಿದುಕೊಂಡು ಆತನಂತೆ ನಾವೆಲ್ಲರೂ ದೇಶದ ಏಳ್ಗೆಗಾಗಿ ಸಮಯ ಬಂದಾಗ ನಿಲ್ಲುತ್ತೇವೆ ಎಂಬ ದೃಢ ನಿರ್ಧಾರ ಇರಬೇಕು. ಆತ ಯುವಕರಿಗೆಲ್ಲ ಪ್ರೇರಣಾ ಶಕ್ತಿಯಾಗಿದ್ದಾರೆ ಎಂದರು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸಮಿತಿಯ ಅಧ್ಯಕ್ಷ ನಾಗಪ್ಪ ಶಿಡಗನಾಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸ್ಟೋನ್ ಕ್ರಷರ್ ಮಾಲೀಕ ಬೀರಯ್ಯ ಹಿರೇಮಠ, ಸುರೇಶ ಕರೆಮಲ್ಲಣ್ಣನವರ, ಮಾರ್ತಾಂಡಪ್ಪ ಮೋಟೆಬೆನ್ನೂರ, ಗುಡಪ್ಪ ಕರಿಮಲ್ಲಣ್ಣನವರ, ಗುತ್ಯಪ್ಪ, ಸುರೇಶ ಮೋಟೆಬೆನ್ನೂರ, ಹುಚ್ಚಪ್ಪ ಕನ್ನಮ್ಮನವರ, ತಿರುಕಪ್ಪ ಮೋಟೆಬೆನ್ನೂರ, ಕುಬೇರಪ್ಪ ಅಗಸನಹಳ್ಳಿ, ಹೊನ್ನಪ್ಪ ಬೆನ್ನೂರ, ಹೊನ್ನಪ್ಪ ನಿಂಬಣ್ಣನವರ, ಜಮಾಲಪ್ಪ ನಿಂಬಣ್ಣನವರ, ಗುಡ್ಡಪ್ಪ ಮೀಸೇರ ಸೇರಿದಂತೆ ಮತ್ತಿತರು ಇದ್ದರು.

error: Content is protected !!