ಕ್ರೀಡೆಯು ವಿಜಯ ವೈಭವವಲ್ಲ

ಕ್ರೀಡೆಯು ವಿಜಯ ವೈಭವವಲ್ಲ

ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ

ಹರಿಹರ, ಸೆ. 12- ವಿದ್ಯಾರ್ಥಿಗಳು ಪಾಠದ ಜೊತೆಗೆ ವಿವಿಧ ಕ್ರೀಡೆಗಳಲ್ಲಿ ತೊಡಗಿಸಿಕೊಂಡರೆ ಮನಸ್ಸಿನ ಭಾವನೆಗಳು ದೃಢವಾಗುತ್ತವೆ. ಧೈರ್ಯ ಹೆಚ್ಚಾಗುತ್ತದೆ ಮತ್ತು ಜೀವನ ಶಿಸ್ತು, ಸಂಯಮದಿಂದ ಕೂಡಿರುತ್ತದೆ ಎಂದು ಮಹರ್ಷಿ ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಹೊರವಲಯದ ಶ್ರೀ ರಾಜನಹಳ್ಳಿ ವಾಲ್ಮೀಕಿ ವಿದ್ಯಾಪೀಠದ ಆವರಣದಲ್ಲಿ 2023-24 ನೇ ಸಾಲಿನ ಹರಿಹರ ತಾಲ್ಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾ ಕೂಟ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಕ್ರೀಡೆಯು ವಿಜಯ ವೈಭವವಲ್ಲ, ಅದರಲ್ಲಿ ತೊಡಗಿಸಿಕೊಳ್ಳುವುದು ಮುಖ್ಯವಾಗಿದೆ. ಕ್ರೀಡೆಗಳಲ್ಲಿ ಭಾಗವಹಿಸುವಾಗ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಂಡರೆ ಯಶಸ್ವಿಯಾಗುತ್ತಾರೆ. ಸೋತಾಗ ನಿರಾಸೆ ಪಟ್ಟುಕೊಳ್ಳದೆ ಸೋಲೇ ಗೆಲುವಿನ ಮೆಟ್ಟಿಲು ಎಂಬ ಭಾವನೆಗಳನ್ನು ಬೆಳೆಸಿಕೊಂಡರೆ ಮುಂದಿನ ದಿನಗಳಲ್ಲಿ ಗೆಲ್ಲುವ  ಅವಕಾಶ ತನ್ನಿಂದ ತಾನೇ ಸೃಷ್ಟಿಯಾಗುತ್ತದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮನಸಿಗೆ ಖುಷಿ, ಉಲ್ಲಾಸ ಹಾಗೂ ಶಿಸ್ತು ಸಿಗುತ್ತದೆ. ಇಲ್ಲಿ ಭಾಗವಹಿಸಿರುವ ಕ್ರೀಡಾಪಟುಗಳು ರಾಜ್ಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆಯುವಂತಾಗಲಿ ಎಂದರು.

ಬಿಇಓ ಎಂ. ಹನುಮಂತಪ್ಪ ಮಾತನಾಡಿ, ವಿದ್ಯಾರ್ಥಿ ಗಳು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಕ್ರೀಡಾ ಸ್ಫೂರ್ತಿ ಹೆಚ್ಚುತ್ತದೆ ಎಂದರು. ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ರಾದ ಎಸ್.ಪಿ. ಮಂಜುಳಾ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ರಾಜನಹಳ್ಳಿ ಗ್ರಾಪಂ ಅಧ್ಯಕ್ಷೆ ಶಂಕುತಲಮ್ಮ, ಮಹರ್ಷಿ ವಾಲ್ಮೀಕಿ ಗುರು ಪೀಠದ ಧರ್ಮದರ್ಶಿ ಕೆ.ಬಿ. ಮಂಜುನಾಥ್ ಕಾಳೇರ್, ಪ್ರೌಢ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಡಿ.ಎಂ. ಮಂಜುನಾಥಯ್ಯ, ವಿಶ್ವನಾಥ್, ರೇವಣಸಿದ್ದಪ್ಪ ಅಂಗಡಿ, ಎನ್.ಪಿ ಮಂಜುಳಾ, ಟಿ.ಎಸ್. ಶಿವಣ್ಣ, ಸಿದ್ದೇಶ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಭಾಕರ್, ಜಿಲ್ಲಾ ಚಿತ್ರಕಲೆ ಸಂಘದ ಅಧ್ಯಕ್ಷ ಪಿ. ನಾಗರಾಜ್, ಪ್ರಾಥಮಿಕ ಶಾಲಾ ಸಂಘದ ಅಧ್ಯಕ್ಷ ಚಂದ್ರಪ್ಪ ದೊಗ್ಗಳ್ಳಿ, ಗ್ರಾಪಂ ಸದಸ್ಯ ನಾಗೇಂದ್ರಪ್ಪ, ಶಿಕ್ಷಕಿ ಗೀತಾ, ಎಂ. ಚಂದ್ರಮ್ಮ, ಕುಬೇಂದ್ರ ನೋಟದರ್, ಮಂಜುನಾಥ್, ರಜಾಕ್‌ಉಲ್ಲಾ, ಶಶಿಕುಮಾರ್, ಶಿವಶಂಕರ್ ಚಿಕ್ಕಬಿದರಿ,  ರವಿಕುಮಾರ್ , ಹಾಲಪ್ಪ ಮಲೇಬೆನ್ನೂರು, ಚಾಯಾ ಕೊಟ್ರೇಶ್, ಗೋಣಿ ಬಸಪ್ಪ, ತಿಪ್ಪಣ್ಣ, ಮಹಾಂತೇಶ್, ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!