ನಾಳೆಯಿಂದ ವರವಿ ಶ್ರೀ ಮೌನೇಶ್ವರ ಜಾತ್ರೆ

ಶಿರಹಟ್ಟಿ, ಸೆ.9- ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕಿನ ಛಬ್ಬಿ ಗ್ರಾಮದ ಶ್ರೀಕ್ಷೇತ್ರ ವರವಿ ಶ್ರೀ ಮೌನೇಶ್ವರ ಜಾತ್ರಾ ಮಹೋತ್ಸವವು ನಾಡಿದ್ದು ದಿನಾಂಕ 11 ರಿಂದ 15 ರವರೆಗೆ ನೆರವೇರಲಿದೆ. 

ದಿನಾಂಕ 11 ರಂದು ಬೆಳಿಗ್ಗೆ 6 ಗಂಟೆಗೆ ಧ್ವಜಾರೋಹಣ ಮತ್ತು ಮಹಾಯಜ್ಞ ನಡೆಯಲಿದ್ದು, ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ, ಶ್ರೀ ವಿರೂಪಾಕ್ಷ ಸ್ವಾಮೀಜಿ, ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಸೇರಿದಂತೆ ಮತ್ತಿತರೆ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಸೋಮನಾಥ ಬಸಪ್ಪ ಕುಂದಾನಗರ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 5.15 ಕ್ಕೆ ರಥೋತ್ಸವ ನೆರವೇರಲಿದೆ.

ದಿನಾಂಕ 12 ರಿಂದ 14 ರವರೆಗೆ ಪ್ರತಿದಿನ ಬೆಳಿಗ್ಗೆ 10.30 ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, ಸಂಜೆ 6.30 ಕ್ಕೆ ಪ್ರವಚನ ನಡೆಯಲಿದೆ. ದಿನಾಂಕ 15 ರಂದು ಬೆಳಿಗ್ಗೆ 10 ರಿಂದ ಸಂಗೀತ ಕಾರ್ಯಕ್ರಮ, ಮಧ್ಯಾಹ್ನ 12 ಕ್ಪ್ರವಚನ, ಮಧ್ಯಾಹ್ನ 3 ರಿಂದ ಜಾತ್ರೆಯ ಸಮಾರೋಪ ಸಮಾರಂಭ ನೆರವೇರಲಿದೆ.

error: Content is protected !!