ದಾವಣಗೆರೆ, ಸೆ. 10- ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಕಂದಗಲ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಲಕಿಯರು ಸಮಗ್ರ ಪ್ರಶಸ್ತಿ ಪಡೆದಿದ್ದಾರೆ.
ಬಾಲಕಿಯರ ವಾಲಿಬಾಲ್ ಸ್ಪರ್ಧೆಯಲ್ಲಿ ಕಲ್ಪನಾ ಮತ್ತು ತಂಡ ಪ್ರಥಮ, ಬಾಲಕಿಯರ ಥ್ರೋಬಾಲ್‌ನಲ್ಲಿ ಕೋಮಲ ಮತ್ತು ತಂಡ ಪ್ರಥಮ, ಬಾಲಕಿಯರ ವಿಭಾಗದ 100 ಮೀ., 200 ಮೀ. ಮತ್ತು 400 ಮೀ. ವಿಭಾಗದಲ್ಲಿ ಕೋಮಲ ಪ್ರಥಮ, 4×100 ರಿಲೇ ಓಟದಲ್ಲಿ ನಿಖಿತಾ ಮತ್ತು ತಂಡ ತೃತೀಯ, ಗುಂಡು ಎಸೆತದಲ್ಲಿ ಕಲ್ಪನಾ ತೃತೀಯ, ತಟ್ಟೆ ಎಸೆತದಲ್ಲಿ ಕೋಮಲ ಪ್ರಥಮ ಹಾಗೂ ಬಾಲಕರ 200 ಮೀಟರ್ ಓಟದಲ್ಲಿ ಮಾರುತಿ ದ್ವಿತೀಯ ಸ್ಥಾನ ಪಡೆದಿದ್ದಾರೆ.