ದಾವಣಗೆರೆ, ಸೆ.10- ಸನಾತನ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿರುವುದನ್ನು ಖಂಡಿಸಿ, ತಮಿಳುನಾಡು ಸಚಿವ ಉದಯನಿಧಿ ಸ್ಟ್ಯಾಲಿನ್ ವಿರುದ್ಧ ಬಿಜೆಪಿ ಯುವ ಮೋರ್ಚಾ ವತಿಯಿಂದ ನಗರದ ಜಯದೇವ ವೃತ್ತದಲ್ಲಿ ಮೊನ್ನೆ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಮಾಜಿ ಸಚೇತಕ ಡಾ|| ಎ.ಹೆಚ್. ಶಿವಯೋಗಿಸ್ವಾಮಿ, ಮಹಾನಗರ ಪಾಲಿಕೆ ಸದಸ್ಯರುಗಳಾದ ಎಸ್.ಟಿ. ವೀರೇಶ್, ಬಿ.ಜೆ. ಅಜಯ್ಕುಮಾರ್, ಪ್ರಸನ್ನಕುಮಾರ್, ಶಿವಾನಂದ, ಮುಖಂಡರುಗಳಾದ ಎಲ್.ಎನ್. ಕಲ್ಲೇಶ್, ಚನ್ನಗಿರಿ ಶಿವಕುಮಾರ್, ವಿಶ್ವಾಸ್, ಮಹೇಂದ್ರ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹಾಗೂ ಪಾಲಿಕೆ ಸದಸ್ಯರಾದ ಶಿವಪ್ರಕಾಶ್ ಆರ್.ಎಲ್., ಯಲ್ಲೇಶ್, ಶ್ರೀಧರ್, ಕಿರಣ್, ಚಂದ್ರು, ಕರ್ಜಗಿ, ಶಶಿಕುಮಾರ್, ರಾಕೇಶ್, ಭಜರಂಗಿ, ಸಚಿನ್ ವೆರ್ಣೇಕರ್, ಧನುಷ್, ಕೊಟ್ರೇಶ್, ಪ್ರದೀಪ್ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.