ಉದ್ಯೋಗ ಶಿಬಿರ

ದಾವಣಗೆರೆ, ಸೆ. 10 –  ತೋಳಹುಣಸೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಹಳೇ ತೋಳಹುಣಸೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಗ್ರಾಮೀಣ ಮಟ್ಟದ ನಿರುದ್ಯೋಗಿ ಅಭ್ಯರ್ಥಿಗಳಿಗೆ ಮೊಬೈಲ್ ರಿಪೇರಿ,   ಮೋಟಾರ್ ವೈಂಡಿಂಗ್  ತರಬೇತಿ, ಪೋಟೋಗ್ರಫಿ, ವಿಡಿಯೋಗ್ರಫಿ  ತರಬೇತಿಗೆ ಇದೇ 15ರಂದು ನೇರ ಸಂದರ್ಶನ ಏರ್ಪಡಿಸಲಾಗಿದೆ.   

ಈ ತರಬೇತಿಗೆ 19 ರಿಂದ 44 ವಯೋಮಿತಿಯ ಅಭ್ಯರ್ಥಿಗಳು  ಅರ್ಜಿ ಸಲ್ಲಿಸಬಹುದು. ಇದೇ ದಿನಾಂಕ 15ರ ಒಳಗಾಗಿ ತರಬೇತಿ ಸಂಸ್ಥೆಗೆ  ನೇರವಾಗಿ ಅಥವಾ ದೂರವಾಣಿ ಮುಖಾಂತರ ಹೆಸರು ನೋಂದಾಯಿಸಬಹುದು. ವಿವರಕ್ಕೆ ಸಂಪರ್ಕಿಸಿ : 7975139332, 7019980484, 9964 111314, 9538395817.

error: Content is protected !!