ರಾಮಕೃಷ್ಣ ಮಿಷನ್ ವತಿಯಿಂದ 130 ನೇ ವರ್ಷದ ಚಿಕಾಗೋ ಉಪನ್ಯಾಸದ ಸಂಸ್ಮರಣಾ ದಿನ ಹಾಗೂ ರಾಮಕೃಷ್ಣ ಮಿಷನ್ನಿನ 125ನೇ ವಾರ್ಷಿಕೋತ್ಸವದ ಅಂಗವಾಗಿ ಯುವ ಸಮಾವೇಶ ಕಾರ್ಯಕ್ರಮವು ಇಂದು ಬೆಳಿಗ್ಗೆ 9 ಕ್ಕೆ ದಾವಣಗೆರೆ-ಹರಿಹರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಸಮುದಾಯ ಭವನದಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್, ರಾಮಕೃಷ್ಣ ಮಿಷನ್ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಆರ್.ಆರ್. ರಮೇಶ ಬಾಬು ಪಾಲ್ಗೊಳ್ಳಲಿದ್ದಾರೆ ಎಂದು ಸಮಿತಿ ಕಾರ್ಯದರ್ಶಿ ಸ್ವಾಮಿ ತ್ಯಾಗೀಶ್ವರಾನಂದ ತಿಳಿಸಿದ್ದಾರೆ.
January 10, 2025