ಸೇಂಟ್‍ಜಾನ್ಸ್‌ನಲ್ಲಿ ಗುರುಗಳಿಗೆ ಸನ್ಮಾನ

ಸೇಂಟ್‍ಜಾನ್ಸ್‌ನಲ್ಲಿ ಗುರುಗಳಿಗೆ ಸನ್ಮಾನ

ದಾವಣಗೆರೆ, ಸೆ. 10 – ಗುರು ಎಂದರೆ ಕೇವಲ ವ್ಯಕ್ತಿಯಲ್ಲ ಅದೊಂದು ಶಕ್ತಿ ಎಂಬಂತೆ ನಗರದ ಸೇಂಟ್‍ಜಾನ್ಸ್ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.

ಮುಖ್ಯ ಆತಿಥ್ಯವನ್ನು ವಹಿಸಿದ್ದ ಕೈಗಾರಿಕೋದ್ಯಮಿ ಬಿ. ಬದ್ರಿನಾಥ್  ಮಾತನಾಡುತ್ತ ಶಿಕ್ಷಕರ ಪ್ರಾಮುಖ್ಯತೆಯ ಬಗ್ಗೆ ಮಕ್ಕಳಿಗೆ ತಿಳಿಸಿದರು.

ಶಿಕ್ಷಕರ ದಿನಾಚರಣೆಯ ವೇದಿಕೆಯ ಅಧ್ಯಕ್ಷೀಯ ಸ್ಥಾನವನ್ನು ಅಲಂಕರಿಸಿದ್ದ ಸೇಂಟ್ ಜಾನ್ಸ್ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳೂ, ಖಾಸಗಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರೂ ಆದ ಟಿ.ಎಂ. ಉಮಾಪತಯ್ಯ ಮಾತನಾಡಿ, ರೈತ, ಸೈನಿಕ, ಶಿಕ್ಷಕ ನಮ್ಮ ದೇಶದ ಬೆನ್ನೆಲುಬು, ಇಸ್ರೋ ವಿಜ್ಞಾನಿಗಳು ಚಂದ್ರಯಾನ-3ರಲ್ಲಿ ಯಶಸ್ಸನ್ನು ಕಂಡಿದ್ದು, ಯಶಸ್ವಿ ವಿಜ್ಞಾನಿಗಳನ್ನು ರೂಪಿಸಿರುವವರು ಶಿಕ್ಷಕರೇ. ಆದ್ದರಿಂದ ತಾವೆಲ್ಲರೂ ಶಿಕ್ಕಕರ ಜ್ಞಾನ ಸಂಪತ್ತನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ದೀಪ ಜಗತ್ತನ್ನು ಬೆಳಗಿಸಿದರೆ, ಶಿಕ್ಷಕ ವ್ಯಕ್ತಿಯ ವ್ಯಕ್ತಿತ್ವವನ್ನು ಬೆಳಗಿಸುತ್ತಾನೆ ಎಂಬಂತೆ ಶಾಲಾ ವಿದ್ಯಾರ್ಥಿ ಸಂಘದ ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಿಕ್ಷಕರಿಗೆ ವಿವಿಧ ಕ್ರೀಡೆಗಳನ್ನು ಆಯೋಜಿಸಿದ್ದರು. 

ಸೇಂಟ್‍ಜಾನ್ಸ್ ವಿದ್ಯಾ ಸಂಸ್ಥೆಯ ಬೋಧಕ ಹಾಗೂ ಬೋಧಕೇತರ ವರ್ಗದವರಿಗೆ ನೆನಪಿನ ಕಾಣಿಕೆಯನ್ನು ನೀಡಿ ಸನ್ಮಾನಿಸಲಾಯಿತು. 

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಹೆಚ್. ಅನಿಲ್ ಕುಮಾರ್‌, ಖಜಾಂಚಿ ಪ್ರವೀಣ್ ಹುಲ್ಲುಮನೆ, ಪ್ರಾಂಶುಪಾಲರಾದ ಆರ್. ಸಯ್ಯದ್‌ ಆರಿಫ್ ಹಾಗೂ ಪ್ರೀತಾ ಟಿ. ರೈ, ಉಪಪ್ರಾಂಶುಪಾಲರಾದ ನೇತ್ರಾವತಿ ಹಾಗೂ ಇತರರು ಉಪಸ್ಥಿತರಿದ್ದರು. 

error: Content is protected !!