ಆರ್.ಪಿ. ಪಾಟೀಲ್ ವಿರಚಿತ `ಯಶಸ್ಸಿನ ಅಧ್ಯಾತ್ಮಿಕತೆ ಸಂಹಿತೆಗಳು’ ಕೃತಿಯು ಲೋಕಾರ್ಪಣೆ ಸಮಾರಂಭವು ಇಂದು ಸಂಜೆ 7 ಗಂಟೆಗೆ ಬಸವ ಕೇಂದ್ರ, ವಿರಕ್ತಮಠದಲ್ಲಿ ನಡೆಯಲಿದೆ.
ಸಾನ್ನಿಧ್ಯವನ್ನು ಶ್ರೀ ಬಸವಪ್ರಭು ಸ್ವಾಮೀಜಿ ವಹಿಸುವರು. ಮುಖ್ಯ ಅತಿಥಿಗಳಾಗಿ ಬಿ.ಎನ್. ಮಲ್ಲೇಶ್ ಆಗಮಿಸುವರು. ಕೃತಿ ಮತ್ತು ಕೃತಿಕಾರರ ಪರಿಚಯವನ್ನು ಜಗನ್ನಾಥ ನಾಡಿಗೇರ ನಡೆಸಿಕೊಡುವರು. ಅರುಣ, ಅಭಿಷೇಕ್ ವಚನ ಗಾಯನ ನಡೆಸಿಕೊಡುವರು.