ಇಂದಿನ ಬದುಕಿಗೆ ಅವಶ್ಯವಿರುವ ಶಿಕ್ಷಣ ಕೊಡಿ

ಇಂದಿನ ಬದುಕಿಗೆ ಅವಶ್ಯವಿರುವ ಶಿಕ್ಷಣ ಕೊಡಿ

ಶಿಕ್ಷಕರಿಗೆ ರಾಣೇಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ ಮನವಿ

ರಾಣೇಬೆನ್ನೂರು, ಸೆ. 7- ಡಾಕ್ಟರ್, ಇಂಜಿನಿಯರ್, ಮಂತ್ರಿ, ಮುಖ್ಯಮಂತ್ರಿ ಕೊನೆಗೆ ಮನುಷ್ಯ ಹೇಗಿರಬೇಕು ಎಂಬುದೆಲ್ಲವನ್ನೂ ಕಲಿಸಿಕೊಡುವವರು ಗುರುಗಳು. ಅವರಿಗೆ ಗೌರವ ಕೊಡದವ ಶಿಷ್ಯನೇ ಅಲ್ಲ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ಇಲ್ಲಿನ ಮೃತ್ಯುಂಜಯ ಕಲ್ಯಾಣ ಮಂಟಪದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಸಂತತಿ ಬಹಳಷ್ಟು ಮುಂದುವರೆದಿದೆ. ಪರಿಸ್ಥಿತಿ ಸಹ ಬಹಳಷ್ಟು ಬದಲಾಗಿದೆ. ಅವರ ಬದುಕಿಗೆ ಅವಶ್ಯವಿರುವ ಶಿಕ್ಷಣ ಕೊಡಬೇಕಿದೆ. ಕೌಶಲ್ಯ ತರಬೇತಿ, ಕಂಪ್ಯೂಟರ್ ಶಿಕ್ಷಣ, ಇಂಗ್ಲಿಷ್ ಜ್ಞಾನ ಇಂದಿನ ಅವಶ್ಯ ಕಲಿಕೆಯಾಗಿದೆ. 

ಈ ದಿಸೆಯಲ್ಲಿ ಸಚಿವ ಮಧು ಬಂಗಾರಪ್ಪ ಅವರು ಚಿಂತನೆ ನಡೆಸಿದ್ದಾರೆ. ಶಿಕ್ಷಕರೂ ಸಹ ಈ ಬದಲಾವಣೆಯನ್ನು ತಮ್ಮಲ್ಲಿ ತಂದುಕೊಳ್ಳಬೇಕಿದೆ ಎಂದು ಕೋಳಿವಾಡ ವಿವರಿಸಿದರು.

ನೀನು ಡಾಕ್ಟರ್ ಆಗಬೇಕು ಮುಂತಾಗಿ ಕಲಿಕೆಯಲ್ಲಿ ಮಕ್ಕಳ ಮೇಲೆ ಯಾವುದೇ ತರಹದ ಒತ್ತಡ ಹಾಕಬೇಡಿ. ಒತ್ತಡದಿಂದಾಗಿ ಅವರು ತಮ್ಮ ಆಶಯಗಳನ್ನು ಕಳೆದುಕೊಳ್ಳುವರು ಎಂದ ಅವರು, ಖಿನ್ನತೆಗೆ ಒಳಗಾದ ತಮ್ಮ ಸಹಪಾಠಿಯ ಬಗ್ಗೆ ಪ್ರಸ್ತಾಪಿಸಿ ಅವರಿಗಿಷ್ಟವಿರುವುದನ್ನು ಓದಲು ಅವಕಾಶ ಮಾಡಿಕೊಡಿ ಎಂದು ಪಾಲಕರಿಗೆ ಮನವಿ ಮಾಡಿದರು.

ಲಿಟಲ್ ಚಾಂಪ್ : ಮಕ್ಕಳ ಬೆಳವಣಿಗೆ ಸರ್ವಾಂ ಗೀಣವಾಗಬೇಕಾದರೆ ಅವರ ಪ್ರತಿಭೆಯನ್ನು
ಗುರುತಿಸಿ, ಸರಿಯಾದ ಶಿಕ್ಷಣ, ತರಬೇತಿಗಳನ್ನು ಕೊಡಿಸಬೇಕು. ಸಂಗೀತ ಹವ್ಯಾಸವಿರುವ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆ ಯೋಗ್ ತರಬೇತಿ
ನೀಡುವ ಲಿಟಲ್ ಚಾಂಪ್ ಕಾರ್ಯಕ್ರಮವನ್ನು ನಮ್ಮ ಪಿಕೆಕೆ ಸಂಸ್ಥೆ ಮಾಡುತ್ತಿದ್ದು, ಶಿಕ್ಷಕರು ಅಂತಹ
ಪ್ರತಿಭೆಗಳನ್ನು ಹುಡುಕಿ ತರಬೇತಿಗೆ ಕಳುಹಿಸುವಂತೆ ಹೇಳಿದ ಶಿಕ್ಷಕರ ಮಾತುಗಳನ್ನು ಕೋಟ್ ಮಾಡಿದ ಶಿಕ್ಷಣಾಧಿಕಾರಿ ಎಂ.ಹೆಚ್. ಪಾಟೀಲ ಅವರು, ಈ ವಿಷಯದ ಬಗ್ಗೆ ನಾಳೆ ಸಂಜೆ ಒಳಗೆ ಕ್ರಮ ಜರುಗಿಸಲು ಶಿಕ್ಷಕರಿಗೆ ಆದೇಶಿಸಿದರು.

ತಹಶೀಲ್ದಾರ್ ಹೆಚ್.ಎನ್. ಶಿರಹಟ್ಟಿ, ತಾ.ಪಂ. ಅಧಿಕಾರಿ ಸುಮಲತಾ, ಡಿವೈಎಸ್ಪಿ ಡಾ. ಗಿರೀಶ್ ಭೋಜಣ್ಣರ, ಎಂ.ಡಿ. ದ್ಯಾಮಣ್ಣನವರ, ಆರ್.ಡಿ. ಹೊಂಬರಡಿ, ನೇತ್ರಾವತಿ ಕಾಟಣ್ಣನವರ, ವಿಮಲಾ ಶಿಡಗನಾಳ, ರೇಣುಕಾ ಬಸೇನಾಯ್ಕರ, ಲಿಂಗರಾಜ ಸುತ್ತಕೋಟಿ ಮತ್ತಿತರರಿದ್ದರು.

error: Content is protected !!