ಇಸ್ಕಾನ್ ಸಂಸ್ಥೆಯ ಕೃಷ್ಣ ಜನ್ಮಾಷ್ಟಮಿ ಸುಂದರ ತೊಟ್ಟಿಲ ತೂಗುವ ಸಂಭ್ರಮ

ಇಸ್ಕಾನ್ ಸಂಸ್ಥೆಯ ಕೃಷ್ಣ ಜನ್ಮಾಷ್ಟಮಿ ಸುಂದರ ತೊಟ್ಟಿಲ ತೂಗುವ ಸಂಭ್ರಮ

ದಾವಣಗೆರೆ, ಸೆ.7- ಇಸ್ಕಾನ್ ಸಂಸ್ಥೆಯ ದಾವಣಗೆರೆಯ ಶಾಖೆ ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ತೊಟ್ಟಿಲನ್ನು ತೂಗಿದ್ದು ಬಹಳ ಸಂತೋಷ ನೀಡಿತು.

ಪರಮಾತ್ಮನ ಬಾಲ ರೂಪ ಕೊಡುವಷ್ಟು ಆನಂದ ಬೇರೆ ಯಾವ ರೂಪವೂ ಕೊಡಲು ಸಾಧ್ಯವಿಲ್ಲ! ಎಷ್ಟು ಮುಗ್ಧತೆ, ಕಣ್ಣಲ್ಲಿ ಎಷ್ಟು ಆನಂದ ಸಂತೃಪ್ತಿ! ಹೊಟ್ಟೆ ತುಂಬಿದ್ದಾರೆ ಸಾಕು! ಅವರಿವರ ಉಡುಪು, ಒಡವೆ, ದುಡ್ಡು ಯಾವುದಕ್ಕೂ ಆಸೆ ಪಡದ, ಹೊಟ್ಟೆ ಕಿಚ್ಚು ಇಲ್ಲದ, ತನ್ನೊಳಗೆ ತಾನು ಸುಖಿಸುವ ಅವಸ್ಥೆ ಬಾಲ್ಯಾವಸ್ಥೆ.ಪರಮಾತ್ಮನೇ ಇಂತಹ ಬಾಲನಾದಾಗ ಎಷ್ಟು ಸಂತಸ ! ಎಷ್ಟು ಸಂಭ್ರಮ ?!

ಅವನ ತೊಟ್ಟಿಲ ಶಾಸ್ತ್ರಕ್ಕೆ ಬಂದ ಗೋಪಿಯರು, ಆನಂದದಿಂದ, ತೂಗಿ ನಲಿದಾಡಿ ಹೇಗೆ ಸಂಭ್ರಮಿಸಿದರು? ಎಂಬುದು ಜನ್ಮಾಷ್ಟಮಿ ಮಹೋತ್ಸವ ತೋರಿಸಿತು. ಬಂದವರಿಗೆಲ್ಲ ತೊಟ್ಟಿಲು ತೂಗುವ ಅವಕಾಶ. ಎಷ್ಟು ವಿಚಿತ್ರ! ಪರಮಾತ್ಮ ನಿದ್ರಾರಹಿತ ಅಷ್ಟೇ ಅಲ್ಲ, ಕಣ್ಣು ಮಿಟುಕಿಸದೆ ಲೋಕರಕ್ಷಣೆ ಮಾಡುವವ.ಅವನನ್ನು ಯಾವಾಗಲೂ ಅಜ್ಞಾನದ ನಿದ್ರೆಯಲ್ಲಿರುವ ನಾವು, ಜೋಗುಳ ಹಾಡಿ ಮಲಗಿಸುವ ಪ್ರಯತ್ನ !

ಶ್ರೀ ಕೃಷ್ಣನಿಗೆ ಷೋಡಶೋಪಚಾರ ಪೂಜೆ ನೈವೇದ್ಯ.ಅತೀ ಸುಂದರ ಮನೋಹರ ಸ್ವಚ್ಛ ವಾತಾವರಣ.ಒಟ್ಟಿನಲ್ಲಿ ಹೃದಯ ತುಂಬಿ ಬಂದಿತು.ಆ ತೊಟ್ಟಿಲನ್ನು ನೋಡಿ ಬಂದ ತೂಗುವ ಲಾಲಿ ಹಾಡು ಇಲ್ಲಿ ಹಾಕಿರುವೆ.

error: Content is protected !!