ಬಸವನಾಳ್ ದೇವಸ್ಥಾನದಲ್ಲಿ ಕಳ್ಳತನ

ಬಸವನಾಳ್ ದೇವಸ್ಥಾನದಲ್ಲಿ ಕಳ್ಳತನ

ದಾವಣಗೆರೆ, ಆ.6- ತಾಲ್ಲೂಕಿನ ಆನಗೋಡು ಹೋಬಳಿ ಬಸವನಾಳು ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ನಿನ್ನೆ ರಾತ್ರಿ ಕಳ್ಳತನವಾಗಿದೆ. ಗರ್ಭಗುಡಿಯ ಬೀಗವನ್ನು ಮುರಿದು ಒಳ ಪ್ರವೇಶಿಸಿದ ಕಳ್ಳರು, ದೇವರ ಒಡವೆ ಸೇರಿದಂತೆ ಸುಮಾರು 8 ರಿಂದ 10 ಲಕ್ಷ ರೂ.ಗಳ ಮೌಲ್ಯದಷ್ಟು ವಸ್ತುಗಳನ್ನು ದೋಚಿದ್ದಾರೆ.

ಪೊಲೀಸ್ ಅಧಿಕಾರಿಗಳು ಇಂದು ಬೆಳಿಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

error: Content is protected !!