ಶಿಷ್ಟಾಚಾರ ಉಲ್ಲಂಘಿಸಿಲ್ಲ : ನಂದಿಗಾವಿ ಶ್ರೀನಿವಾಸ್

ಶಿಷ್ಟಾಚಾರ ಉಲ್ಲಂಘಿಸಿಲ್ಲ : ನಂದಿಗಾವಿ ಶ್ರೀನಿವಾಸ್

ಹರಿಹರ, ಸೆ. 6 – ರಾಷ್ಟ್ರೀಯ ಪಕ್ಷವೊಂದರ ಅಭ್ಯರ್ಥಿಯಾಗಿ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿ ಸಿದ್ದ ನನಗೂ ಕಾನೂನು, ನಿಯಮ ಗಳ ಅವರಿವಿದೆ. ನಾನು ಭಾಗವ ಹಿಸಿರುವ ಯಾವುದೇ ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾ ಚಾರ ಉಲ್ಲಂಘನೆಯಾಗಿಲ್ಲ ಎಂದು ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಹೇಳಿದರು. ನಗರದ ತಮ್ಮ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸರ್ಕಾರಿ ಕಾರ್ಯಕ್ರಮಗಳ ಶಿಷ್ಟಾಚಾರ ಉಲ್ಲಂಘನೆಗೆ ಕಾರಣನಾಗಿದ್ದೇನೆ, ಮಾಜಿ ಶಾಸಕರನ್ನು ಕಾರ್ಯಕ್ರಮಗಳಿಗೆ ಬರದಂತೆ ತಡೆದಿದ್ದೇನೆ ಎಂದು ಶಾಸಕ ಬಿ.ಪಿ.ಹರೀಶ್ ಆರೋಪಿಸುತ್ತಿದ್ದಾರೆ ಎಂದರು.

ಆದರೆ, ಹರಿಹರದ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಗೃಹಲಕ್ಷ್ಮಿ ಯೋಜನೆಯ ಚಾಲನಾ ಕಾರ್ಯಕ್ರಮದಲ್ಲಿ ಯಾವುದೇ ವೇದಿಕೆ ಕಾರ್ಯಕ್ರಮ ಗಳಿರಲಿಲ್ಲ, ಸಾರ್ವಜನಿಕರಿಗೆ ತಮ್ಮ ಅಭಿಪ್ರಾಯವನ್ನು ಹೇಳಿಕೊಳ್ಳಲು ಅವಕಾಶವಿತ್ತು ಅಷ್ಟೆ. ಸ್ಥಳೀಯ ವಾಗಿ ವಿಪಕ್ಷ ನಾಯಕನಾಗಿ, ಅಲ್ಲದೇ, ಒಬ್ಬ ಸಾರ್ವಜನಿಕನಾಗಿ ನನ್ನ ಪಕ್ಷದ ಕಾರ್ಯಕ್ರಮಗಳ ಬಗ್ಗೆ ಮಾತನಾ ಡಿರುವುದರಲ್ಲಿ ತಪ್ಪಿಲ್ಲ ಎಂದರು.

ಈ ಸಂದರ್ಭದಲ್ಲಿ ನಗರಸಭಾ ಉಪಾಧ್ಯಕ್ಷ ಕೆ.ಜಿ ಸಿದ್ದೇಶ್, ಸದಸ್ಯರಾದ ಶಂಕರ್ ಖಟಾವಕರ್, ಅಲಿಂ, ಎಂ.ಎಸ್ ಬಾಬುಲಾಲ್, ಮುಖಂಡರಾದ ಸೈಯದ್ ಸನಾವುಲ್ಲಾ, ಎಲ್.ಬಿ ಹನುಮಂತಪ್ಪ, ಅಬಿದಲಿ ಮೆಲೆಬೆನ್ನೂರು, ದಾದಾಪೀರ್ ಭಾನು ವಳ್ಳಿ, ಸಂತೋಷ್ ನೋಟದರ್, ಕಿರಣ್ ಭೂತೆ, ಮಲ್ಲೇಶ್ ಕಮಲಾಪುರ ಸೇರಿದಂತೆ ಇತರರಿದ್ದರು.

error: Content is protected !!