ನಗರದಲ್ಲಿ ಇಂದು-ನಾಳೆ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹಾ ಮಹೋತ್ಸವ

ದಾವಣಗೆರೆ, ಸೆ. 6- ಇಸ್ಕಾನ್ ಸಂಸ್ಥೆ ದಾವಣಗೆರೆ ಶಾಖೆ ವತಿಯಿಂದ ನಾಳೆ ದಿನಾಂಕ 7 ಹಾಗೂ ನಾಡಿದ್ದು 8 ರಂದು ಎರಡು ದಿನಗಳ ಕಾಲ ನಗರದ ತೊಗಟವೀರ ಕಲ್ಯಾಣ ಮಂಟಪದಲ್ಲಿ 10 ನೇ ಬಾರಿ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಅವಧೂತ ಚಂದ್ರಹಾಸ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮಹೋತ್ಸವದ ಅಂಗವಾಗಿ ಶ್ರೀ ಕೃಷ್ಣನ ಆರಾಧನೆ, ವಿಶೇಷ ಪೂಜೆ, ಪ್ರವಚನ ಇತರೆ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ನಾಳೆ ದಿನಾಂಕ 7 ರ ಗುರುವಾರ ಸಂಜೆ 6 ರಿಂದ 7 ರವರೆಗೆ ಸಂಕೀರ್ತನೆ, ಭಜನೆ, 7 ರಿಂದ 7.45 ರವರೆಗೆ ಶ್ರೀ ರಾಧಾ ಕೃಷ್ಣ ಅಭಿಷೇಕ, 7.45 ರಿಂದ ರಾತ್ರಿ 8.30 ರವರೆಗೆ ಲೀಲಾ ಪುರುಷೋತ್ತಮ (ನೃತ್ಯೋಲ್ಲಾಸ) ಕಾರ್ಯಕ್ರಮವನ್ನು ನಗರದ ಕಲಾಕಲ್ಪ ಕಲಾ ಶಾಲೆಯ ಎಂ.ಪಿ. ಸ್ಮೃತಿ ನಡೆಸಿಕೊಡಲಿದ್ದಾರೆ. 

8.30 ರಿಂದ 9.30 ರವರೆಗೆ ಶ್ರೀ ಕೃಷ್ಣನ ಕುರಿತ ಪ್ರವಚನ, 9.30 ರಿಂದ 10 ರವರೆಗೆ ತೊಟ್ಟಿಲೋತ್ಸವ, 10 ರಿಂದ 10.30 ರವರೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹಾ ಮಂಗಳಾರತಿ ನಡೆಯಲಿದೆ.

ನಾಡಿದ್ದು ದಿನಾಂಕ 8 ರ ಶುಕ್ರವಾರ ಶ್ರೀ ಪ್ರಭುಪಾದರ ವ್ಯಾಸ ಪೂಜಾ ಮಹೋತ್ಸವದ ಅಂಗವಾಗಿ ಬೆಳಿಗ್ಗೆ 10 ರಿಂದ ಕೀರ್ತನೆ ಮತ್ತು   ಭಜನೆ, 11 ರಿಂದ ಪ್ರವಚನ, ಮಧ್ಯಾಹ್ನ 12.30 ರಿಂದ ಪುಷ್ಪಾಂಜಲಿ ಮತ್ತು ಆರತಿ, 1 ಕ್ಕೆ ಮಹಾಪ್ರಸಾದ ವಿತರಣೆ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಇಸ್ಕಾನ್ ಸಂಸ್ಥೆಯ ಲಕ್ಷ್ಮೀನಾರಾಯಣಪ್ರಭು ಪಂಡರಾಪುರ, ನಾಮದೇವ ಪಿಸೆ, ಶಿವಕುಮಾರ್, ಶ್ರೀಕಾಂತ್ ಮತ್ತಿತರರು ಉಪಸ್ಥಿತರಿದ್ದರು. 

error: Content is protected !!