ಹರಿಹರ, ಸೆ. 6 – ನಗರದ ಆರೋಗ್ಯ ಮಾತೆ ಚರ್ಚ್‌ನ ಮಾತೆ ಮೇರಿಯಮ್ಮನ ಜಾತ್ರಾ ಮಹೋತ್ಸವವು ನಾಡಿದ್ದು ದಿನಾಂಕ 8 ರಂದು ನಡೆಯಲಿರುವ ಪ್ರಯುಕ್ತ ಪೊಲೀಸ್ ಇಲಾಖೆ ವತಿಯಿಂದ ಪ್ರೊಬೇಷನರಿ ಡಿವೈಎಸ್ಪಿ ಹರ್ಷವರ್ಧನ್ ಹಾಗೂ ಪಿಎಸ್ಐ ದೇವಾನಂದ್ ನೇತೃತ್ವದಲ್ಲಿ ಪೊಲೀಸ್ ಭದ್ರತಾ ಸಭೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಗುತ್ತೂರು ಠಾಣೆಯ ಪಿಎಸ್ಐ ಅರವಿಂದ್, ಮಲೇಬೆನ್ನೂರು ಠಾಣೆಯ ಪಿಎಸ್ಐ ಪ್ರಭು ಕೆಳಗಿನ ಮನೆ, ಪಿಎಸ್ಐ ಚಿದಾನಂದ ಇತರರು ಹಾಜರಿದ್ದರು.
January 16, 2025