ಚನ್ನಗಿರಿ : ಪ್ರತಿಭಾ ಕಾರಂಜಿ ವಿವಿಧ ಸ್ಪರ್ಧೆಗಳಲ್ಲಿ ಐಐಟಿಸಿ ಶಾಲೆ ವಿಜಯ

ಚನ್ನಗಿರಿ : ಪ್ರತಿಭಾ ಕಾರಂಜಿ ವಿವಿಧ ಸ್ಪರ್ಧೆಗಳಲ್ಲಿ ಐಐಟಿಸಿ ಶಾಲೆ ವಿಜಯ

ಚನ್ನಗಿರಿ, ಸೆ. 4 – ಇಂದಿರಾ ಗಾಂಧಿ ವಸತಿ ಶಾಲೆ, ಮಾವಿನಹೊಳೆ ಚನ್ನಗಿರಿ ತಾಲ್ಲೂಕಿನಲ್ಲಿ ನಡೆದ 2023-24 ನೇ ಸಾಲಿನ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ  ಐಡಿಯಲ್ ಇಂಟರ್ ನ್ಯಾಷನಲ್ ಟೆಕ್ನೋ ಸ್ಕೂಲ್ ಶಾಲೆಯ ವಿದ್ಯಾರ್ಥಿಗಳು ಭಾ ಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿರುತ್ತಾರೆ. 

ಮನ್ವಿತ್ ಹೆಚ್. ಮತ್ತು ವರ್ಷ ಎಂ. ಎನ್. ಕಥೆ ಹೇಳುವುದರಲ್ಲಿ ಜಾರಾ ಬೇಗಂ ಅರೇಬಿಕ್ ಪಠಣದಲ್ಲಿ, ಲೆನಿ ಅಲ್ಫೋನ್ಸಾ ಬಿನೋಯ್ ಇಂಗ್ಲಿಷ್ ಕಂಠಪಾಠದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. 

ಅಪೇಕ್ಷಾ ಆರ್. ಅಭಿನಯ ಗೀತೆಯಲ್ಲಿ, ಮೇದಾಂತ್ ಎಸ್. ಕ್ಲೇ ಮಾಡಲಿಂಗ್‌ನಲ್ಲಿ, ಮೋಹನ್ ಗೌಡ ಮಿಮಿಕ್ರಿಯಲ್ಲಿ, ಮೋನಿಶಾ ಟಿ.ಪಿ. ಚಿತ್ರಕಲೆಯಲ್ಲಿ ಯಜುರ್ವೇದಿ ಬಿ.ಎಸ್. ಸಂಸ್ಕೃತ ಪಠಣದಲ್ಲಿ, ನವನೀತ್ ಕೆ. ಪಿ. ಛದ್ಮವೇಷದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಹಾಗೂ ದಿಗಂತ್ ಬಿ ಎಸ್. ಇಂಗ್ಲಿಷ್ ಕಂಠಪಾಠದಲ್ಲಿ ಡಿಂಪಲ್ ಎ. ಎಂ. ಲಘು ಸಂಗೀತದಲ್ಲಿ, ರಿಷಿಕಾ ಎಂ. ಲಘು ಸಂಗೀತದಲ್ಲಿ, ವರ್ಷ ಬಿ ಎಸ್. ಭಕ್ತಿ ಗೀತೆಯಲ್ಲಿ, ತರುಣ್ ಜಿ.ಎನ್. ಚಿತ್ರಕಲೆ ಯಲ್ಲಿ, ದರ್ಶನ್ ವೈ.ಎನ್. ಛದ್ಮವೇಷದಲ್ಲಿ, ಗುರುಆರ್ಯನ್ ಟಿ. ವಿ. ಆಶುಭಾಷಣದಲ್ಲಿ ಸುಫಿಯಾನ್ ಖಾನ್ ಅರೇಬಿಕ್ ಪಠಣದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

error: Content is protected !!