ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಇಂದು ಬೆಳಿಗ್ಗೆ 10.30 ಗಂಟೆಗೆ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ರವರ ಜನ್ಮ ದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಹಾಗೂ ದಾವಣಗೆರೆ ಉತ್ತರ ಮತ್ತು ದಕ್ಷಿಣ ವಲಯದ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿದೆ.
ಸಚಿವ ಶಾಮನೂರು ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆ ವಹಿಸುವರು. ಲೋಕಸಭಾ ಸದಸ್ಯ ಜಿ.ಎಂ. ಸಿದ್ದೇಶ್ವರ ಅವರು ಭಾವಚಿತ್ರಗಳ ಅನಾವರಣಗೊಳಿಸುವರು. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸುವರು.
ಮುಖ್ಯ ಅತಿಥಿಗಳು : ಕೆ.ಎಸ್.ಬಸವಂತಪ್ಪ, ಬಿ.ದೇವೇಂದ್ರಪ್ಪ, ಶಾಂತನಗೌಡ ಡಿ.ಜಿ, ಬಸವರಾಜು ವಿ.ಶಿವಗಂಗಾ, ಬಿ.ಪಿ ಹರೀಶ್, ಕೆ.ಅಬ್ದುಲ್ ಜಬ್ಬಾರ್, ವಿನಾಯಕ ಬಿ.ಹೆಚ್, ಯಶೋಧ ಯಗ್ಗಪ್ಪ, ಗೀತಾ ದಿಳ್ಯಪ್ಪ, ಡಾ. ವೆಂಕಟೇಶ್ ಎಂ.ವಿ, ಉಮಾ ಪ್ರಶಾಂತ್, ಸುರೇಶ್ ಬಿ. ಇಟ್ನಾಳ್, ರೇಣುಕಾ, ವೀರೇಶ್ ಎಸ್.ಒಡೇನ್ಪುರ, ಡಾ. ಅಶ್ವತ್ಥ್ ಎಂ.ಬಿ, ರಾಮಭೋವಿ, ಎಸ್. ಗೀತಾ, ಜಿ ಕೊಟ್ರೇಶ್, ಪಸೀಹ್ ಉದ್ದೀನ್ ಶಾಕೀರ್ ಕೆ.ಎ, ಪುಷ್ಟಲತಾ ಉಪಸ್ಥಿತರಿರುವರು. ಜಗನ್ನಾಥ್ ನಾಡಿಗೇರ ಉಪನ್ಯಾಸ ನೀಡುವರು.