ದಾವಣಗೆರೆ, ಸೆ. 4- ನಗರದ ಯುಬಿ ಡಿಟಿ ಇಂಜಿನಿಯ ರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಅಮ್ರೀನ್ ತಾಜ್ ಅವರಿಗೆ ಬೆಳಗಾವಿ ತಾಂತ್ರಿಕ ವಿವಿಯಿಂದ ಪಿಹೆಚ್ಡಿ ಪದವಿ ಪ್ರದಾನ ಮಾಡಲಾಗಿದೆ. `ಎಫೆಕ್ಟ್ ಆಫ್ ನ್ಯಾನೋ ಫಿಲ್ಲರ್ ಅಲ್ಯೂಮಿನಿಯಂ ಆಕ್ಸೈಡ್ ಅಂಡ್ ಗ್ರಾಫಿನ್ ಆನ್ ಮೆಕ್ಯಾನಿಕಲ್ ಅಂಡ್ ಫಿಸಿಕಲ್ ಪ್ರಾಪರ್ಟೀಸ್ ಕೆನಫ್ ಎಪಾಕ್ಷಿ ಕಾಂಪೋಜಿಟ್ಸ್’ ವಿಷಯ ಕುರಿತು ಪ್ರಬಂಧ ಮಂಡಿಸಿದ್ದರು. ಇವರಿಗೆ ಯುಬಿಡಿಟಿ ಕಾಲೇಜಿನ ಪ್ರಾಧ್ಯಾಪಕ ಡಾ. ಆರ್.ಪಿ. ಸ್ವಾಮಿ ಮತ್ತು ಡಾ. ಕಿಶನ್ ನಾಯ್ಕ ಮಾರ್ಗದರ್ಶನ ಮಾಡಿದ್ದರು.
ಅಮ್ರೀನ್ ತಾಜ್ ಗೆ ಪಿಹೆಚ್ಡಿ ಪದವಿ
