ಬಿಐಇಟಿಗೆ ಕ್ರಿಕೆಟ್‌ನಲ್ಲಿ ಗೆಲುವು

ದಾವಣಗೆರೆ, ಸೆ.3- ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಬೋಧಕ ಸಿಬ್ಬಂದಿಗಳಿಗೆ ಬಿಐಇಟಿಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕ್ರಿಕೆಟ್ ಕೀಡಾಕೂಟದಲ್ಲಿ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯವು ಟ್ರೋಫಿ ಗೆದ್ದು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಒಟ್ಟು ನಾಲ್ಕು ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು. ಅಂತಿಮ ಪಂದ್ಯದಲ್ಲಿ ಜಿಎಂಐಟಿ ತಂಡವು ನಿಗದಿತ 8 ಓವರ್‌ಗಳಲ್ಲಿ 71 ರನ್ ಗಳಿಸಿತು. ಪಂದ್ಯ ಗೆಲ್ಲಲು 72 ರನ್‌ಗಳ ಸ್ಕೋರ್  ಬಿಐಇಟಿ ತಂಡವು ಎರಡು ಚೆಂಡು ಬಾಕಿ ಇರುವಂತಯೇ 72 ರನ್ ಪೇರಿಸಿ ವಿಜಯಶಾಲಿಯಾಯಿತು.  ಐಎಸ್ ವಿಭಾಗದ ಬಿ.ಎಸ್. ಶ್ರೀನಿವಾಸ ಇವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಗಳಿಸಿದರು. ಶೇಖ್‌, ಇಮ್ರಾನ್ ಅವರು ಬಿ.ಐ.ಇ.ಟಿ. ತಂಡದ ನಾಯಕರಾಗಿದ್ದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲ ಡಾ. ಹೆಚ್.ಬಿ. ಅರವಿಂದ ಮತ್ತು ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ ಇವರು ವಿಜೇತರನ್ನು ಅಭಿನಂದಿಸಿದರು.

error: Content is protected !!