ಅಕ್ರಮ ಗಾಂಜಾ ಮಾರಾಟ : ಬಂಧನ

ದಾವಣಗೆರೆ, ಸೆ.3- ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಆಂಜನೇಯ ಬಡಾವಣೆ 12ನೇ ಕ್ರಾಸ್‌ನ ಮನೆಯೊಂದರ ಮೇಲಿನ ಕೊಠಡಿಯಲ್ಲಿ ಅಕ್ರಮವಾಗಿ ಗಾಂಜಾ ಸೊಪ್ಪು ಇಟ್ಟುಕೊಂಡಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆಯ ಎಸ್. ಶಿವಾಸ್, ಮನೋಜ್, ವಿಶ್ವನಾಥ್ ಪೂಜಾರ್  ಬಂಧಿತರು. 

ಅವರಿಂದ 1.50 ಲಕ್ಷ ರೂ. ಮೌಲ್ಯದ 5 ಕೆಜಿ 800 ಗ್ರಾಂ ಗಾಂಜಾ ಸೊಪ್ಪು, 600 ರೂ. ನಗದು, 2 ಚಿಲುಮೆಗಳನ್ನು ವಶಪಡಿಸಿಕೊಂಡಿದ್ದಾರೆ.

error: Content is protected !!