ಹೊನ್ನಾಳಿ, ಸೆ.1- ತಾಲ್ಲೂಕಿನ ಘಂಟ್ಯಾ ಪುರ ಗ್ರಾಮದ ತುಂಗಭದ್ರಾ ಫಾರಂನ ನಿವಾಸಿ, ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಜಿ.ಮಹೇಶ್ವರಪ್ಪ ಮತ್ತು ಮೀನಾಕ್ಷಮ್ಮ ದಂಪತಿ ಪುತ್ರ ಡಾ. ಜಿ.ಎಂ. ಅರವಿಂದ್ ಅತ್ಯು ತ್ತಮ ವೈದ್ಯರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪ್ರತಿಷ್ಠಿತ ನೆಬ್ಕಾರ್ ಮೀಡಿಯಾ ನಡೆಸಿದ ಸಮೀಕ್ಷೆಯಲ್ಲಿ ದಕ್ಷಿಣ ಭಾರತದ 10 ವೈದ್ಯರುಗಳಲ್ಲಿ ಡಾ. ಜಿ.ಎಂ.ಅರವಿಂದ್ ಅವರು ಅತ್ಯುತ್ತಮ ವೈದ್ಯರಾಗಿ ಹೊರಹೊಮ್ಮಿದ್ದಾರೆ. ಇದು ಪ್ರತಿಷ್ಠಿತ 2023ರ ಔಟ್ಲುಕ್ ವಾರಪತ್ರಿಕೆಯಲ್ಲಿ ಪ್ರಕಟವಾಗಿದೆ.
ಅರವಿಂದ್ ಅವರ ಆರೋಗ್ಯ ಕ್ಷೇತ್ರದಲ್ಲಿನ ಅತ್ಯುತ್ತಮ ಸೇವೆಗೆ ಅತ್ಯುತ್ತಮ ವೈದ್ಯ ಎಂಬ ಪ್ರಶಸ್ತಿಯೂ ಲಭಿಸಿದೆ. ಇವರಿಗೆ 2022ರ ಜುಲೈ ತಿಂಗಳಲ್ಲಿ ಇಂಡಿಯಾ ಟುಡೇ ವಾರ ಪತ್ರಿಕೆಯವರು ನಡೆಸಿದ ಸಮೀಕ್ಷೆಯಲ್ಲಿಯೂ ಸಹ ಇವರನ್ನು ಅತ್ಯುತ್ತಮ ವೈದ್ಯರೆಂದು ಘೋಷಿಸಲಾಗಿತ್ತು.
ಡಾ. ಜಿ.ಎಂ.ಅರವಿಂದ್ ಅವರು ಪ್ರಸ್ತುತ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಮೆಡಿಷಿನ್ ವಿಭಾಗದಲ್ಲಿ ಕಳೆದ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಾಥಮಿಕ ಶಾಲೆಯಿಂದ ಪಿಯುಸಿವರೆಗೆ ಶಿವಮೊಗ್ಗದಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ, ಮೈಸೂರಿನ ಜೆ.ಎಸ್.ಎಸ್. ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್., ದಾವಣಗೆರೆಯ ಜೆ.ಜೆ.ಎಂ. ಮೆಡಿಕಲ್ ಕಾಲೇಜಿನಲ್ಲಿ ಎಂ.ಡಿ. ಮುಗಿಸಿದ್ದಾರೆ.