ಲಕ್ಷ್ಮಿ ಸೊಸೈಟಿಯಲ್ಲಿ ಅವ್ಯವಹಾರದ ಆರೋಪ

ಲಕ್ಷ್ಮಿ ಸೊಸೈಟಿಯಲ್ಲಿ ಅವ್ಯವಹಾರದ ಆರೋಪ

ದಾವಣಗೆರೆ, ಸೆ.1- ನಗರದ ಲಕ್ಷ್ಮಿ ಕ್ರೆಡಿಟ್ ಕೋ-ಆಪರೇಟಿವ್  ಸೊಸೈಟಿಯಲ್ಲಿ 2011-12ರಿಂದಲೂ ಕೋಟಿಗಟ್ಟಲೇ ಅವ್ಯವಹಾರ ನಡೆದಿದೆ ಎನ್ನಲಾಗಿದ್ದು, ಸೊಸೈಟಿ ಆಡಳಿತ ಮಂಡಳಿ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ  ಸಲ್ಲಿಸಲಾಯಿತು ಎಂದು ಎಂ.ಬಿ.ಜಗನ್ನಾಥ ರಾವ್ ತಿಳಿಸಿದ್ದಾರೆ.

ಸೊಸೈಟಿಯ ಸುಮಾರು ಜನ ಠೇವಣಿದಾರರು ನಿಧನರಾಗಿದ್ದಾರೆ, ಸುಮಾರು ಜನ ನಿರ್ಗತಿಕ ರಾಗಿದ್ದಾರೆ, ಸಾವಿರಾರು ಬಡ ಜನರಿಗೆ ಅನ್ಯಾಯವಾಗಲು ಸೊಸೈಟಿ ಕಾರ್ಯದರ್ಶಿ, ಹಿಂದಿನ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನಿರ್ದೇಶಕರುಗಳೇ  ಮೂಲ ಕಾರಣರಾಗಿ ದ್ದಾರೆ. ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಚಿವರನ್ನು ಒತ್ತಾಯಿಸಲಾ ಯಿತು. ತಮ್ಮ ಮನವಿಗೆ ಸಚಿವರು ಸ್ಪಂದನೆ ಮಾಡಿದ್ದು, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಜಗನ್ನಾಥರಾವ್ ತಿಳಿಸಿದ್ದಾರೆ.

error: Content is protected !!