ದೇವರಬೆಳಕೆರೆ ಪಿಕಪ್ ನಾಲೆಯ ಹೂಳು ತೆಗೆಸುವ ಕಾಮಗಾರಿಗೆ ಚಾಲನೆ

ದೇವರಬೆಳಕೆರೆ ಪಿಕಪ್ ನಾಲೆಯ ಹೂಳು ತೆಗೆಸುವ ಕಾಮಗಾರಿಗೆ ಚಾಲನೆ

ಮಲೇಬೆನ್ನೂರು, ಆ. 31- ದೇವರಬೆಳಕೆರೆ ಪಿಕಪ್ ಡ್ಯಾಂನ ಸಿದ್ಧವೀರಪ್ಪ ನಾಲೆಯಲ್ಲಿ ತುಂಬಿಕೊಂಡಿರುವ ಹೂಳನ್ನು ಸ್ವಂತ ಖರ್ಚಿನಲ್ಲಿ ತೆಗೆಸುವುದಾಗಿ ರೈತರಿಗೆ ಕೊಟ್ಟ ಮಾತಿನಂತೆ ಶಾಸಕ ಬಿ.ಪಿ. ಹರೀಶ್ ಮತ್ತು ಭದ್ರಾ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷ ವೈ. ದ್ಯಾವಪ್ಪ ರೆಡ್ಡಿ ಅವರು ಗುರುವಾರ ಹೂಳು ತೆಗೆಸುವ ಕಾಮಗಾರಿಗೆ ಚಾಲನೆ ನೀಡಿದರು.

ದೇವರಬೆಳೆಕೆರೆ ಪಿಕಪ್ ಡ್ಯಾಂನಿಂದ ನಂದಿತಾವರೆವರೆಗೆ ನಾಲೆಯ ಆಯ್ದ ಭಾಗಗಳಲ್ಲಿ ತುಂಬಿಕೊಂಡಿರುವ ಹೂಳಿನಿಂದಾಗಿ ನೀರು ಕೆಳಭಾಗಕ್ಕೆ ಬರುತ್ತಿಲ್ಲ. ಭಾನುವಳ್ಳಿ ಮತ್ತು ನಂದಿತಾವರೆಯಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಆಗ ಸ್ಥಳಕ್ಕೆ ಆಗಮಿಸಿದ್ದ ಶಾಸಕ ಹರೀಶ, ನಂದಿಗಾವಿ ಶ್ರೀನಿವಾಸ್, ವೈ. ದ್ಯಾವಪ್ಪ ರೆಡ್ಡಿ, ಎಇಇ ಧನಂಜಯ ಮತ್ತು ಭಾನುವಳ್ಳಿ ಬಲ್ಲೂರು ಕೆಂಚಪ್ಪ ಅವರು ಸೇರಿ ಸ್ವಂತ ಖರ್ಚಿನಲ್ಲಿ ನಾಲೆಯಲ್ಲಿ ಹೂಳು ತೆಗೆಸಿ ಕೊಡುವುದಾಗಿ ರೈತರಿಗೆ ಹೇಳಿದ್ದರು.

ಆ ಪ್ರಕಾರ ಗುರುವಾರ ಮಧ್ಯಾಹ್ನ ದೇವರಬೆಳಕೆರೆ ಪಿಕಪ್ ಡ್ಯಾಂ ಬಳಿಯಿಂದ ನಾಲೆಯಲ್ಲಿ ರುವ ಹೂಳು ತೆಗೆಯುವ ಇಟಾಚಿ ಕಾಮಗಾರಿಗೆ ಚಾಲನೆ ನೀಡಿದರು.

ಸುಮಾರು 30 ತಾಸು ಕೆಲಸವನ್ನು ಇಟಾಚಿಯಿಂದ ಮಾಡಿಸಿ ಸುಮಾರು 2 ಕಿ.ಮೀ. ನಷ್ಟು ನಾಲೆಯಲ್ಲಿ ಹೂಳನ್ನು ತೆಗೆಸುವುದಾಗಿ ಎಇಇ ಧನಂಜಯ ತಿಳಿಸಿದರು.

ನಂದಿತಾವರೆಯ ಮುರುಗೇಂದ್ರಯ್ಯ, ಗದಿಗೆಪ್ಪ, ಶಿವಯ್ಯ, ಎನ್.ಪಿ. ಧರ್ಮರಾಜ್, ಸಂತೋಷ್ ಬಾತಿ, ದೇವರಬೆಳಕೆರೆಯ ಪ್ರಕಾಶ್, ಕರಿಬಸಪ್ಪ, ಕಡ್ಲೆಗೊಂದಿ ಹನುಮಂತರೆಡ್ಡಿ, ಗಿರಿಯಪ್ಪ, ಪತಿಯಪ್ಪರೆಡ್ಡಿ, ಭಾನು ವಳ್ಳಿಯ ಬಲ್ಲೂರು ಕೆಂಚಪ್ಪ, ಪ್ರಕಾಶ್, ಬಸವರಾಜ್, ಎಇ ಭರತ್ ಮತ್ತಿತರರು ಈ ವೇಳೆ ಇದ್ದರು. 

error: Content is protected !!