ಹೊನ್ನಾಳಿಯಲ್ಲಿ ವಿಮಾ ಸಪ್ತಾಹ ಆರಂಭ : ವಿವಿಧ ಸ್ಪರ್ಧೆಗಳು

ಹೊನ್ನಾಳಿ, ಆ. 31 – ಹೊನ್ನಾಳಿ ಎಲ್‍ಐಸಿಯ 67ನೇ ವಿಮಾ ಸಪ್ತಾಹ ಅಂಗವಾಗಿ ಸೆಪ್ಟೆಂಬರ್ ಒಂದ ರಿಂದ ಏಳರ ವರೆಗೆ ವಿಧ್ಯಾರ್ಥಿಗಳಿಗೆ ಹಾಗೂ ವಿಮಾ ನೌಕರರಿಗೆ ವಿವಿಧ ಕಾರ್ಯಕ್ರ ಮಗಳನ್ನು ಹಮ್ಮಿಕೊಂಡಿರುವುದಾಗಿ ಎಲ್‍ಐಸಿಯ ಶಾಖಾಧಿಕಾರಿ ಕೆ. ಬಾಲಚಂದ್ರ ಹೇಳಿದರು.

ಕಛೇರಿಯಲ್ಲಿ ಇಂದು ನಡೆದ ವಿಮಾ ಸಪ್ತಾಹ ಕಾರ್ಯಕ್ರಮದ ಸಭೆಯಲ್ಲಿ ಮಾತ ನಾಡಿದ ಅವರು, ಸೆ.1 ರ ಶುಕ್ರ ವಾರ ಬೆಳಿಗ್ಗೆ 10 ಕ್ಕೆ ಕಾರ್ಯಕ್ರಮ ಉದ್ಘಾಟಿಸಲಿದ್ದು. ಕೇಂದ್ರ ಕಛೇರಿಯಿಂದ ಗೊಲ್ಲರಹಳ್ಳಿ ಗ್ರಾಮದವರೆಗೂ ಎಲ್‍ಐಸಿ ಬಗ್ಗೆ ಜಾಗೃತಿ ಮೂಡಿಸಲು ಬೈಕ್ ರಾಲಿ ನಡೆಸಲಾಗುವು ದೆಂದರು. ಸೆಪ್ಟೆಂಬರ್ 3 ರಂದು 1 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಡ್ರಾಯಿಂಗ್ ಸ್ಪರ್ಧೆ ಸೆ.4 ರಂದು ವಿಮಾ ನೌಕರರಿಗೆ ವಿವಿಧ ಸ್ಪರ್ದೆಗಳು ಸೆ.5 ರಂದು ಗುರವಂದನಾ ಕಾರ್ಯಕ್ರಮ ಸೆ.6 ರಂದು ವಿಮಾ ಪ್ರತಿನಿದಿಗಳ ಸಮಾಲೋಚನೆ, ಸೇ.7 ರಂದು ಸಮಾರೋಪ ಸಮಾರಂಭ ಹಾಗೂ ವಿವಿಧ ಸ್ಪರ್ದಾ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ ಎಂದರು.

ಸಭೆಯಲ್ಲಿ ಕಛೇರಿಯ ಎಓ ರಮೇಶ್, ಸಹಾಯಕ ಶಾಖಾಧಿಕಾರಿ ಪ.ಎಸ್.ಸ್ವಾಮಿ ಪ್ರತಿನಿದಿ ಶಕೀಲ್‍ಅಹ್ಮದ್ ಇದ್ದರು.

error: Content is protected !!