ಆರ್. ಜಿ. ಪ್ರಿ ಸ್ಕೂಲ್‌ನಲ್ಲಿ `ಓಣಂ’ ಆಚರಣೆ

ಆರ್. ಜಿ. ಪ್ರಿ ಸ್ಕೂಲ್‌ನಲ್ಲಿ `ಓಣಂ’ ಆಚರಣೆ

ದಾವಣಗೆರೆ, ಆ.31- ನಗರದ ಸಿದ್ದವೀರಪ್ಪ ಬಡಾವಣೆಯ   ಆರ್.ಜಿ. ಪ್ರಿ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ  `ಓಣಂ’  ಹಬ್ಬವನ್ನು ಆಚರಿಸಲಾಯಿತು.  

ಕಾರ್ಯಕ್ರಮದಲ್ಲಿ  ಮಕ್ಕಳಿಗೆ  ಓಣಂ ಕುರಿತು ಶಾಲೆಯ ಪ್ರಿನ್ಸಿ ಪಾಲ್‌ ಚೈತ್ರ ಆರ್. ಅವರು ಮಾಹಿತಿ ನೀಡಿದರು. ಮಕ್ಕಳಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾದಾಗ ಮಕ್ಕಳ ಮನಸ್ಸು ಕಲಿಯುವತ್ತಾ ಆಸಕ್ತಿ ಯನ್ನು ವಹಿಸುತ್ತದೆ, ಇದರಿಂದ ಮಕ್ಕಳ ಕಲಿಕೆಗೆ ಅನುಕೂಲವಾಗುತ್ತದೆ ಎಂದು ಹೇಳಿದರು.   ಶಾಲೆಯಲ್ಲಿ ಮಕ್ಕಳು `ಓಣಂ’ ಹಬ್ಬದ ಡ್ರೆಸ್‌ ಧರಿಸಿ  ಹಬ್ಬದಂತೆ ಆಚರಿಸಿದರು. ಸುಮಾ, ಸಂತೋಷ್‌, ರಿಯಾ, ಇತರೆ ಸಿಬ್ಬಂದಿ ವರ್ಗದವರು ಹಾಜರಿದ್ದರು. ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಶ್ವೇತ ಆರ್. ಗಾಂಧಿ ಅಧ್ಯಕ್ಷತೆ ವಹಿಸಿದ್ದರು.

error: Content is protected !!