ಸಿದ್ಧಗಂಗಾ ವಿದ್ಯಾರ್ಥಿನಿ ಯಶಸ್ವಿನಿ ಪ್ರಥಮ

ಸಿದ್ಧಗಂಗಾ ವಿದ್ಯಾರ್ಥಿನಿ ಯಶಸ್ವಿನಿ ಪ್ರಥಮ

ದಾವಣಗೆರೆ, ಆ. 31-  ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,   ಕ್ಷೇತ್ರಶಿಕ್ಷಣಾಧಿಕಾರಿಗಳು ಹಾಗೂ ಸಮನ್ವಯಾಧಿಕಾರಿಗಳ ಕಛೇರಿಯಿಂದ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ ವಿಚಾರ ಗೋಷ್ಠಿಯಲ್ಲಿ  `ಸಿರಿಧಾನ್ಯಗಳು -ಅದ್ಭುತ ಆಹಾರ ಅಥವಾ ರೂಢಿಗತ ಪಥ್ಯಾಹಾರ’ ವಿಷಯ ಮಂಡಿಸಿದ ನಗರದ ಸಿದ್ಧಗಂಗಾ ಸಂಯುಕ್ತ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಯಶಸ್ವಿನಿ ಕೆ. ಪಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. 

ಸಮಾಜದಲ್ಲಿನ ಮೂಢನಂಬಿಕೆಗಳ ಆಧಾರಿತ ಪ್ರದರ್ಶಿಸಿದ ವಿಜ್ಞಾನ ನಾಟಕ ದ್ವಿತೀಯ ಸ್ಥಾನ ಪಡೆಯಿತು. ಮಾರ್ಗದರ್ಶಿ ಶಿಕ್ಷಕರಾದ ನಂದಾ, ದೀಪ, ರಶ್ಮಿ ಅವರನ್ನು ಸಂಸ್ಥೆಯ ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ. 

error: Content is protected !!