ಚಿರಂತನದಿಂದ ನಾಡಿದ್ದು ಥೈಲ್ಯಾಂಡ್‌ನಲ್ಲಿ `ಅಂತರರಾಷ್ಟ್ರೀಯ ವಿಶ್ವ ಸಂಸ್ಕೃತಿ ಉತ್ಸವ’

ಚಿರಂತನದಿಂದ ನಾಡಿದ್ದು ಥೈಲ್ಯಾಂಡ್‌ನಲ್ಲಿ `ಅಂತರರಾಷ್ಟ್ರೀಯ ವಿಶ್ವ ಸಂಸ್ಕೃತಿ ಉತ್ಸವ’

ದಾವಣಗೆರೆ, ಆ. 31- ನಾಡಿದ್ದು ದಿನಾಂಕ 3 ರಂದು ಸಂಜೆ 5.30ಕ್ಕೆ ಬ್ಯಾಂಕಾಕ್ ನ ರಾಜಮಂಗಳ ಯುನಿವರ್ಸಿಟಿ ಹಾಲ್ ನಲ್ಲಿ ನಡೆಯುವ ಅಂತರರಾಷ್ಟ್ರೀಯ ಮಟ್ಟದ  `ವಿಶ್ವ ಸಂಸ್ಕೃತಿ ಉತ್ಸವ’ ನಗರದ ಚಿರಂತನ ಸಾಂಸ್ಕೃತಿಕ ಸಂಸ್ಥೆ ಭಾಗವಹಿಸಲಿದೆ.

ಥೈಲ್ಯಾಂಡ್‌ನಲ್ಲಿ ನಡೆಯಲ್ಲಿರುವ ಈ ನೃತ್ಯ ಸಂಗೀತೋ ತ್ಸವಕ್ಕೆ ಭಾರತದಿಂದ 80ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಲಿದ್ದು ದಾವಣಗೆರೆ, ತುಮಕೂರು, ಮೈಸೂರು ಹಾಗೂ ಬೆಂಗಳೂರಿನ ನೃತ್ಯ ತಂಡಗಳು ಪ್ರದರ್ಶನ ನೀಡ ಲಿವೆ. ಮೈಸೂರಿನ ನಿಮಿಷಾಂಬ ಸ್ಕೂಲ್ ಆಫ್ ಆರ್ಟ್ಸ್, ಬೆಂಗಳೂರಿನ ನೃತ್ಯ ದೇಗುಲ ಸಂಸ್ಥೆ, ತುಮಕೂರಿನ ನಿರ್ಮಲಾ ನಾಟ್ಯ ಕಲಾನಿಕೇತನ, ಮೈಸೂರಿನ ಸೌಮ್ಯ ನೃತ್ಯ ಶಾಲಾ ಮತ್ತು  ದಾವಣಗೆರೆಯ ಚಿರಂತನದ ಕಲಾವಿದರು ಭಾರತದ ವಿವಿಧ ಶಾಸ್ತ್ರೀಯ ಹಾಗೂ ಜಾನಪದ ಶೈಲಿಯ ನೃತ್ಯಗಳು ಪ್ರದರ್ಶನಗಳೊಳ್ಳಲಿವೆ ಎಂದು ಚಿರಂತನ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ದೀಪಾ ರಾವ್ ತಿಳಿಸಿದ್ದಾರೆ.

ಯುನೈಟೆಡ್ ಕಿಂಗ್‌ಡಮ್ (ಹ್ಯಾರೋ ಲಂಡನ್) ಹಾಗೂ ದುಬೈನಲ್ಲಿ ಯಶಸ್ವೀ ನೃತ್ಯ ಸಂಗೀತ ಉತ್ಸವಗಳನ್ನು ಆಯೋಜಿಸಿದ್ದು, ಕಾರ್ಯಕ್ರಮದಲ್ಲಿ  ಸುಶೀಲ್ ಕುಮಾರ್ ಸರಫ್ (ಚೇರ್ಮನ್ ಸರಫ್ ಗ್ರೂಪ್ ಆಫ್ ಕಂಪನೀಸ್ ಬ್ಯಾಂಕಾಕ್),  ಶ್ರೀಮತಿ ರೇವತಿ ಕಾಮತ್ (ಪರಿಸರ ತಜ್ಞೆ ಹಾಗು ಫಿಲಾಂತ್ರಫಿಸ್ಟ್ ಬೆಂಗಳೂರು),  ಮಿಸ್ ಜರೀನ್ (ಮಲೇಶಿಯನ್ ರಾಯಭಾರ ಕಛೇರಿ), ಡಾ. ಎಂ. ಸಿವಗಾರು (ಭಾರತೀಯ ರಾಯಭಾರ ಕಛೇರಿ), ಶ್ರೀ ಆರ್. ಮುತ್ತು (ಭಾರತೀಯ ರಾಯಭಾರ ಕಛೇರಿ) ಅತಿಥಿಗಳಾಗಿ ಉಪಸ್ಥಿತರಿರುವರು.

ಕಾರ್ಯಕ್ರಮದಲ್ಲಿ ಕಲಾವಿದರಿಗೆ ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು,  ಚಿರಂತನದ ಈ ವಿಶೇಷ ಪ್ರಯತ್ನಕ್ಕೆ ಥೈಲ್ಯಾಂಡ್ ನ ಸಂಸ್ಥೆಗಳಾದ ಥಾಯ್ ಕನ್ನಡ ಬಳಗ, ತೆಲುಗು ಅಸೋಸಿಯೇಷನ್ ಥೈಲ್ಯಾಂಡ್, ಥೈಲ್ಯಾಂಡ್ ತಮಿಳ್ ಫೆಡರೇಷನ್ ಕೈಜೋಡಿಸಿವೆ ಎಂದು ದೀಪಾ ರಾವ್ ತಿಳಿಸಿದ್ದಾರೆ.

error: Content is protected !!