ಬಾಡಾ ಕ್ರಾಸ್ ಬಳಿ ಇರುವ ಶ್ರೀಗುರು ಪುಟ್ಟರಾಜ ನಗರದಲ್ಲಿರುವ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ, 270ನೇ ನೂಲು ಹುಣ್ಣಿಮೆ ಶಿವಾನುಭವ ಗೋಷ್ಠಿ ಮತ್ತು ಸಂಗೀತ ಕಾರ್ಯಕ್ರಮ ನಡೆಯಲಿದೆ.
ಸಾನ್ನಿಧ್ಯವನ್ನು ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮತ್ತು ಶ್ರೀ ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜ ವಹಿಸುವರು.
ಅಥಣಿ ಎಸ್. ವೀರಣ್ಣ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಎ.ಹೆಚ್. ಶಿವಮೂರ್ತಿಸ್ವಾಮಿ ಆಗಮಿಸುವರು. ಆಶ್ರಮದ ಅಂಧಮಕ್ಕಳಿಂದ ಪ್ರಾರ್ಥನೆ ಸಲ್ಲುವುದು. ವೇ. ಶಿವಬಸಯ್ಯ ಚರಂತಿಮಠ ನಿರೂಪಿಸುವರು.
ಪ್ರಸಾದ ಸೇವೆ : ಡಾ. ಟಿ.ಜಿ. ನಿರಂಜನ್ ಹಾಗೂ ಕುಟುಂಬದವರು, ವೈಶ್ಯ ಸೇವಾ ಭೂಷಣ ಪಾಲ ರಾಜಗುಪ್ತರವರು ಲಿಂ. ಶ್ರೀಮತಿ ಪಿ.ಆರ್. ಶಾರದ ಮತ್ತು ಸಹೋದರರು, ಮಕ್ಕಳು, ಮೊಮ್ಮಕ್ಕಳು ಹಾಗೂ ಶ್ರೀಮತಿ ಅಕ್ಕಮ್ಮ ಬಸವರಾಜಪ್ಪ ಮತ್ತು ಮಕ್ಕಳು, ದೀಕ್ಷಿತ್ ಜಲೇಂದ್ರ ಕವಿತ, ಶ್ರೀಮತಿ ನಿರ್ಮಲ, ಗಣೇಶ್ (ಆಂಜನೇಯ ಮಿಲ್), ದಾವಣಗೆರೆ.