ಆನೆಕೊಂಡದಲ್ಲಿ ಸೆ. 11ರಂದು ಶ್ರೀ ಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ

ಆನೆಕೊಂಡದಲ್ಲಿ ಸೆ. 11ರಂದು  ಶ್ರೀ ಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ

ದಾವಣಗೆರೆ, ಆ. 30- ಆನೆಕೊಂಡದ ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬರುವ ಸೆಪ್ಟೆಂಬರ್ 11ರ ಸೋಮವಾರ ಸಂಜೆ 6.50ಕ್ಕೆ  ಶ್ರೀ ಬಸವೇಶ್ವರ ಮತ್ತು ನೀಲಾನಹಳ್ಳಿಯ  ಶ್ರೀ ಆಂಜನೇಯ ಸ್ವಾಮಿ ಹಾಗೂ ನಿಟುವಳ್ಳಿ ಶ್ರೀ ದುರ್ಗಾಂಬಿಕಾ ದೇವಿ ಮತ್ತು ಸುತ್ತಮುತ್ತಲಿನ ದೇವರುಗಳೊಂದಿಗೆ ಮೆರವಣಿಗೆ  ನಡೆದು, ನಂತರ ಶ್ರೀ ಬಸವೇಶ್ವರ ಸ್ವಾಮಿಯ ಜಾತ್ರೋತ್ಸವ ಮತ್ತು ಕಾರಣಿಕೋತ್ಸವ ಜರುಗಲಿದೆ.

ಸೆಪ್ಟೆಂಬರ್ 9ರ ಶನಿವಾರ ಶನಿದೇವರ ಪುರಾಣ ಹಾಗೂ ಸೆ. 10ರ ಭಾನುವಾರ ಅನ್ನ ಸಂತರ್ಪಣೆ ಹಾಗೂ ರಾತ್ರಿ 9ಕ್ಕೆ ಭಜನಾ ಕಾರ್ಯಕ್ರಮವಿದೆ.

error: Content is protected !!