ದಾವಣಗೆರೆ, ಆ.29- ತೋಳಹುಣಸೆಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಪಂಚಾಯತ್ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಬಡತನ ರೇಖೆಗಿಂತ ಕೆಳಗಿರುವ ಗ್ರಾಮೀಣ ಮಹಿಳೆಯರಿಗೆ 30 ದಿನಗಳ ಕಾಲ ಉಚಿತವಾಗಿ ಊಟ ಮತ್ತು ವಸತಿಯೊಂದಿಗೆ ಮೊಬೈಲ್ ರಿಪೇರಿ, ಮೋಟರ್ ವೈಂಡಿಂಗ್, ಪೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿ ನೀಡಲಾಗುವುದು.
ತರಬೇತಿ ಪಡೆಯಲು ಇಚ್ಚಿಸುವ 18 ರಿಂದ 45 ವರ್ಷ ವಯಸ್ಸಿನ ಮಹಿಳೆಯರು ನಾಡಿದ್ದು ದಿನಾಂಕ 31ರೊಳಗಾಗಿ ಹೆಸರು ನೋಂದಾಯಿಸ ಬಹುದು. ವಿವರಕ್ಕೆ ಸಂಪರ್ಕಿಸಿ : 7975139332, 7019980484, 9964111314, 9538395817, 9481877076.