ದಾವಣಗೆರೆ, ಆ. 29- ನಗರದ ಕುವೆಂಪು ರಸ್ತೆಯ ಮಾಧ್ವ ಯುವಕ ಸಂಘದಲ್ಲಿ ಋಗ್ವೇದ ಉಪಾಕರ್ಮ ಆಯೋಜಿಸಲಾಗಿತ್ತು.
ಶ್ರೀ ಮಾಧ್ವ ಯುವಕ ಸಂಘದ ವತಿಯಿಂದ ಶ್ರಾವಣ ಶುದ್ಧ ತ್ರಯೋದಶಿ ಋಗ್ವೇದಿಗಳಿಗೆ ನಿತ್ಯ ಉಪಾಕರ್ಮವನ್ನು ಶ್ರೀ ಸರ್ವಜ್ಞಾಚಾರ್ಯ ಸೇವಾ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇ.ಪಂ. ಜಯತೀರ್ಥ ಆಚಾರ್ ವಡೇರ್ ಅವರ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳಾದ ಪ್ರಕಾಶ್ ಪಾಟೀಲ್, ನಾಗೇಶ್ ಪಾಟೀಲ್, ತಾಡಪತ್ರಿ ವೆಂಕಟಗಿರಿ, ರಘುನಾಥ್, ಸಮರ್ಥ ಕುಲಕರ್ಣಿ, ರಮೇಶ್ ನಾಡಿಗೇರ, ಶ್ರೀಧರ ಕುಲಕರ್ಣಿ, ಮಧುಸೂದನ್, ರಘೋತ್ತಮ, ಎಂ.ಜಿ. ಶ್ರೀಕಾಂತ್ ಭಾಗವಹಿಸಿದ್ದರು.