ಐಡಿಯಾ ಹ್ಯಾಕಥಾನ್ ಮೌಲ್ಯ ಮಾಪನ

ಐಡಿಯಾ ಹ್ಯಾಕಥಾನ್ ಮೌಲ್ಯ ಮಾಪನ

ದಾವಣಗೆರೆ, ಆ.29- ನಗರದ ಜೈನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಎಸ್ಎಂಇ ಐಡಿಯಾ ಮಹಿಳೆಯರ ಹ್ಯಾಕಥಾನ್ 3.0 ಮೌಲ್ಯಮಾಪನ ನಡೆಸಲಾಯಿತು.  ಜೆಐಟಿಯನ್ನು ಭಾರತ ಸರ್ಕಾರದ ಕೈಗಾರಿಕೆಗಳು ಮತ್ತು ವಾಣಿಜ್ಯ ಸಚಿವಾಲಯ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ  ಹೋಸ್ಟ್ ಸಂಸ್ಥೆ ಎಂದು ಗೊತ್ತುಪಡಿಸಲಾಗಿದೆ.  ಯೋಜನೆ  ಸ್ಕ್ರೀನಿಂಗ್ ಮತ್ತು ಮೌಲ್ಯಮಾಪನವನ್ನು ವಿವಿಧ ವಿಭಾಗಗಳ ತಜ್ಞರು ನಡೆಸಿದರು.

ಎಂಎಸ್ಎಂಇ  ಸರ್ಕಾರದ ಜಂಟಿ ನಿರ್ದೇಶಕ   ರಾಜೇಂದ್ರ ಕದಂ, ಜೆಐಟಿಯ ಆರ್ ಅಂಡ್ ಡಿ  ನಿರ್ದೇಶಕ ಡಾ.ಮಂಜಪ್ಪ, ಎಂ.ಎಸ್. ಜಯಚಂದ್ರ ಆರಾಧ್ಯ, ಸಿಲಿಕಾನ್ ಮೈಕ್ರೋಸಿಸ್ಟಮ್ಸ್ ಸಿಇಒ, ಬೆಂಗಳೂರು,  ವಿಕಾಸ್. ಎಂ., ಮಂಗಳೂರಿನ ಎನ್‍ಐಐಟಿಯ ಮಾಜಿ ಸಿಇಒ  ಪ್ರಶಾಂತ್ ನಾಯಕ್, ಡ್ರೋನ್ ಜಂಕ್ಷನ್;     ಶ್ರೇಯಸ್ ವೆರ್ಣೇಕರ್, ಸಿಇಒ, ರೋವೆ ಲ್ಯಾಬ್ಸ್ ಪ್ರೈ. ಲಿ,   ದಾವಣಗೆರೆ ವಿಶ್ವವಿದ್ಯಾನಿಲಯದ ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ನಾಗಸ್ವರೂಪ್,  ಕೆಎಸ್‍ಪಿಸಿಬಿಯ ಪರಿಸರ ಅಧಿಕಾರಿ ಡಾ.ಎಚ್.ಲಕ್ಷ್ಮೀಕಾಂತ, ಬಿಎಂಎಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‍ಮೆಂಟ್, ಬೆಂಗಳೂರು, ಇನ್‍ಕ್ಯುಬೇಷನ್ ಸೆಲ್ ಮುಖ್ಯಸ್ಥರು  ಡಾ. ಕೆ.ಆರ್. ರವಿಚಂದ್ರ ಮತ್ತು ದಾವಣಗೆರೆ  ಜೆಐಟಿಯ ಪ್ರಾಂಶುಪಾಲ ಡಾ. ಡಿ.ಬಿ. ಗಣೇಶ್ ಅವರು ವಿಚಾರಗಳ ಮೌಲ್ಯಮಾಪನ ಮಾಡಿದರು.

ಎಂಎಸ್ಎಂಇ  ಸರ್ಕಾರದ ಜಂಟಿ ನಿರ್ದೇಶಕ  ರಾಜೇಂದ್ರ ಕದಂ ಮಾತನಾಡಿ,   `ಐಡಿಯಾ ಹ್ಯಾಕಥಾನ್ 3.0′ ಕುರಿತು ಮಹಿಳಾ ಉದ್ಯಮಿಗಳು ಸಾಮಾಜಿಕ ಬದಲಾವಣೆಯ ತಳಹದಿಯಾಗಿರುವುದರಿಂದ ಭಾರತ ಸರ್ಕಾರವು ಮಹಿಳಾ ಸಬಲೀಕರಣದ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಘನತೆ, ಅವಕಾಶ, ಅವರ ಪ್ರಯತ್ನಗಳನ್ನು ಶ್ಲಾಘಿಸುತ್ತದೆ ಎಂದರು. 

error: Content is protected !!