ನಗರದಲ್ಲಿ ಇಂದು ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರ ದಿನಾಚರಣೆ

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದಿಂದ ಮಹಾ ಶರಣ ಲಿಂ. ಮಾಗನೂರು ಬಸಪ್ಪ ಮತ್ತು ಲಿಂ. ಸರ್ವಮಂಗಳಮ್ಮ ಸ್ಮಾರಕ ದತ್ತಿ ಮತ್ತು ಪರಿಷತ್ತಿನ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ. ದತ್ತಿ ದಾನಿಗಳು, ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನದ ಅಧ್ಯಕ್ಷ ಎಂ.ಬಿ. ಸಂಗಮೇಶ್ವರ ಗೌಡ್ರು ಕಾರ್ಯಕ್ರಮ ಉದ್ಘಾಟಿಸುವರು. ಡಾ.ಹೆಚ್.ಎಸ್.ಮಂಜುನಾಥ ಕುರ್ಕಿ `ವಚನ ಸಾಹಿತ್ಯ ಮತ್ತು ಮಾಗನೂರು ಬಸಪ್ಪ’ ವಿಷಯ ಕುರಿತು ಮಾತನಾಡಲಿದ್ದಾರೆ. ಡಾ.ಎಂ.ಜಿ. ಈಶ್ವರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಎಂ.ಎಸ್. ಸುನಂದಾದೇವಿ, ಜಿ.ಸಿ. ನೀಲಾಂಬಿಕೆ, ಕಮಲಾ ಸೊಪ್ಪಿನ ಭಾಗವಹಿಸಲಿದ್ದಾರೆ. ಶ.ಸಾ.ಪ. ಜಿಲ್ಲಾಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.

error: Content is protected !!