ಹರಿಹರ ಮರ್ಚೆಂಟ್ ಸೌಹಾರ್ದ ಸಹಕಾರಿಗೆ 12.32 ಲಕ್ಷ ರೂ. ಲಾಭ

ಹರಿಹರ ಮರ್ಚೆಂಟ್ ಸೌಹಾರ್ದ ಸಹಕಾರಿಗೆ 12.32 ಲಕ್ಷ ರೂ. ಲಾಭ

ಹರಿಹರ, ಅ. 26 – ಹರಿಹರ ಮರ್ಚೆಂಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತವು 12.32 ಲಕ್ಷ ರೂ. ಲಾಭ ಗಳಿಸಿದ್ದು, ಷೇರುದಾರರಿಗೆ ಶೇ.7ರ ಡೆವಿಡೆಂಟ್ ನೀಡುತ್ತಿದೆ ಎಂದು ಸಂಘದ ನಿಯಮಿತ ಅಧ್ಯಕ್ಷ ಹೆಚ್.ಎಂ. ನಾಗರಾಜ್ ಹೇಳಿದರು.

ನಗರದ ರಚನಾ ಕ್ರೀಡಾ ಟ್ರಸ್ಟ್ ನಲ್ಲಿ ನಡೆದ ಹರಿಹರ ಮರ್ಚೆಂಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತದ 9 ನೇ ವರ್ಷದ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹರಿಹರ ಮರ್ಚೆಂಟ್ ಸೌಹಾರ್ದ ಸಹಕಾರಿ ಸಂಘವು ಚಿಕ್ಕದಾಗಿ ಆರಂಭಗೊಂಡು ಇಂದಿಗೆ 8 ವರ್ಷ ಪೂರೈಸಿ 9ನೇ  ವಾರ್ಷಿಕ ಸಾಮಾನ್ಯ ಸಭೆಯನ್ನು ಆಚರಿಸುತ್ತಿದೆ. 761 ಷೇರುದಾರರನ್ನು ಹೊಂದಿ, 23 ಲಕ್ಷದ 38 ಸಾವಿರ ರೂಪಾಯಿ ಷೇರುದಾರರ ಬಂಡವಾಳದೊಂದಿಗೆ, 2 ಕೋಟಿ 25 ಲಕ್ಷದ 75 ಸಾವಿರ ರೂಪಾಯಿ ಠೇವಣಿಗಳನ್ನು ಹೊಂದಿದೆ ಎಂದರು.

ಇದು, ಕಳೆದ ಸಾಲಿಗಿಂತ, 8 ಲಕ್ಷದ 32 ಸಾವಿರ ರೂಪಾಯಿ ಹೆಚ್ಚು ಆಗಿರುತ್ತದೆ. ಜಾಮೀನು ಸಾಲ, ಭದ್ರತಾ ಸಾಲ, ವಾಹನಗಳ ಸಾಲ ಹಾಗೂ ಠೇವಣಿಗಳ ಆಧಾರಿತ ಸಾಲ ಸೇರಿದಂತೆ ಈ ಸಾಲಿನಲ್ಲಿ 2 ಕೋಟಿ 20 ಲಕ್ಷದ 16  ಸಾವಿರ ರೂಪಾಯಿ ಸಾಲವನ್ನು  ನೀಡಲಾಗಿದೆ ಎಂದರು.

ಈ ವೇಳೆ ಸಹಕಾರಿ ಸಂಘಕ್ಕೆ ಸಹಕಾರ ನೀಡಿರುವ ಬೊಂಗಾಳೆ ಕಾಳಪ್ಪ, ರಾಮಚಂದ್ರ ಶೆಟ್ಟಿ, ಪರುಶುರಾಮ್ ಬದಿ, ನಾಗರಾಜ್ ಪಿ, ಜಿ. ಕೊಟ್ರಪ್ಪ, ಮೋಹನ್ ರಾವ್, ಮಾರುತಿ ರಾವ್, ಮಹೇಶ್ವರಪ್ಪ ಬೆಣ್ಣೆ, ಸುರೇಶ್ ಜಿ.ಕೆ. ಜಾರ್ಜ್ ( ಬಾಬಣ್ಣ)  ಮಾಜಿ ಕಾರ್ಯದರ್ಶಿ ಶಿವನಗೌಡ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಡಾ ಪ್ರವೀಣ್
ಹೆಗಡೆ, ನಿರ್ದೇಶಕರಾದ ಜಿ.ಕೆ. ವೀರಣ್ಣ, ಲೆಕ್ಕ ಪರಿಶೋಧಕರು ಹಾಗೂ ತೆರಿಗೆ ಸಲಹೆಗಾರರಾದ
ಹೆಚ್.ಎಸ್. ಮಂಜುನಾಥ್, ಜಿ ನಂಜಪ್ಪ, ಹೆಚ್.ವಿ. ಸುಜಯ್, ಮಯೂರ್  ಹೆಚ್.ಎನ್. ರಾಘವೇಂದ್ರ ಬೊಂಗಾಳೆ, ಡಾ ಸೀಮಾ ಎನ್. ವಿ.ಟಿ.ನಾಗರಾಜ್, ಸುನಿತಾ ಪಿ.ಬದ್ದಿ, ನಾಗರತ್ನ ಜಿ.ಕೆ., ಮಂಜುಳಾ ಪ್ರಸಾದ್, ಸಿಬ್ಬಂದಿ ವರ್ಗದವರಾದ ಪ್ರಭಾರಿ ವ್ಯವಸ್ಥಾಪಕ
ರುದ್ರಯ್ಯ ಕಳ್ಳಿಮಠ, ಬೀರಪ್ಪ ಎಸ್ ಕಮತರ, ಎ.ವಿ. ಶ್ರೀನಾಥ್, ಜಯಲಕ್ಷ್ಮಿ ವಿ.ಎಸ್. ಪಿಗ್ಮಿ ಸಂಗ್ರಾಹಕರಾದ, ಕರಿಬಸಪ್ಪ ಪಿ.ಎಸ್. ವೀರೇಶ್ ಎನ್.ಎಸ್.
ಪರಶುರಾಮ್ ಪವರ್, ಎಸ್.ಬಿ. ಕುಂಚೂರು, ರಾಘವೇಂದ್ರ ಇತರರು ಉಪಸ್ಥಿತರಿದ್ದರು.       

error: Content is protected !!