ರಾಣೇಬೆನ್ನೂರು ಜೈನ್ ಸಮಾಜದಿಂದ ಮಹಾಮೃತ್ಯುಂಜಯ ಜಪ

ರಾಣೇಬೆನ್ನೂರು, ಆ. 26- ಇಲ್ಲಿನ ಜೈನ್ ಸಮಾಜದ 9 ಮಹಿಳೆಯರು, ಮೂವರು ಪುರುಷರು ಸೇರಿದಂತೆ ಒಟ್ಟು 12 ಜನರು 30 ಉಪವಾಸಗಳನ್ನು ಮಾಡುವದರ ಮೂಲಕ ಮಹಾಮೃತ್ಯುಂಜಯ ಜಪ  ಮಾಡಿದ್ದು. ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿಯಂತಹ ಮಹಾನಗರಗಳಲ್ಲಿ ಸಾಧ್ಯವಾಗದ್ದನ್ನು ರಾಣೇಬೆನ್ನೂರು ಸಮಾಜ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯವಾದುದು ಎಂದು ಜೈನ್ ಮುನಿ ಆಚಾರ್ಯ ಶ್ರೀ ಮಹೇಂದ್ರಸಾಗರ ಸುರೀಶ್ವರಜಿ ಅವರು ಅಭಿಪ್ರಾಯಿಸಿದರು.

ಶ್ರೀ ಗಳು ರಂಗನಾಥ ನಗರದಲ್ಲಿರುವ ದೇವಸ್ಥಾನದಲ್ಲಿ ಇಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ನಡೆಯಲಿರುವ ಸಮಾರಂಭ ಕುರಿತು ವಿವರಿಸುತ್ತಿದ್ದರು.

  ಎಲ್ಲ ಧರ್ಮಗಳು, ಎಲ್ಲ ಧರ್ಮ ಗುರುಗಳು ಶಾಂತಿ, ಸೌಹಾರ್ದತೆ, ನೆಮ್ಮದಿಯ ಬದುಕಿಗೆ ಮಾರ್ಗದರ್ಶಕರಾಗಿದ್ದಾರೆ, ಇಂತಹ ಜಪಗಳ ಧಾರ್ಮಿಕ ಕಾರ್ಯಕ್ರಮಗಳಿಂದ ಸಿಗಲಿರುವ ಪ್ರತಿಫಲ ಕೇವಲ ನಮ್ಮ ಉರು, ರಾಜ್ಯ, ದೇಶಕ್ಕೆ ಸೀಮಿತವಾಗಿರದೆ ಇಡೀ ವಿಶ್ವಕ್ಕೆ ದೊರಕಲಿದೆ ಎಂದು ಶ್ರೀ ಮಹೇಂದ್ರಸಾಗರ ಸುರೀಶ್ವರಜಿ ನುಡಿದರು.

ಚಾತುರ್ಮಾಸ ಅಂದರೆ ಭಕ್ತಿಯ ಶಹನಾಯಿ ನುಡಿಯುತ್ತದೆ.ಉದಾರತೆಯ ಮುತ್ತುಗಳು ಮಾರಲ್ಪಡುತ್ತವೆ. ಪಾವಿತ್ರ್ಯತೆಯ ತೋರಣ ಕಟ್ಟಲಾಗುತ್ತದೆ. ಸಂವೇದನೆಯ ಜ್ಯೋತಿ ಪ್ರಜ್ವಲಿಸುತ್ತದೆ ಎಂದು ಜೈನ್ ಸಮಾಜದವರ ಆಚರಣೆಯ ಈತಿಂಗಳ ಮಹತ್ವವನ್ನು ಮುನಿಗಳು ಅರ್ಥೈಸಿದರು.

12 ಜನ 30 ಉಪವಾಸ ಮಾಡಿದ್ದಾರೆ. ಕೆಲವರು 8, 15 ಹೀಗೆ ಉಪವಾಸ ಮಾಡಿದ್ದು ದಿನಾಂಕ 29 ಕ್ಕೆ ಮುಕ್ತಾಯಗೊಳ್ಳಲಿದೆ. ಅಂದು ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮೂಲಕ ಅವರನ್ನು ದೇವಸ್ಥಾನದಲ್ಲಿ ನಡೆಯುವ ಸಮಾರಂಭಕ್ಕೆ ಕರೆತರಲಾಗುವುದು ಎಂದು ಅವರು ಹೇಳಿದರು. ಉಪ ಸಭಾಪತಿ ರುದ್ರಪ್ಪ ಲಮಾಣಿ, ಶಾಸಕ ಪ್ರಕಾಶ ಕೋಳಿವಾಡ ಪಾಲ್ಗೊಳ್ಳುವರು ಎಂದು ಜೈನ್ ಸಂಘದ ಅಧ್ಯಕ್ಷ ಪ್ರಕಾಶ ಜೈನ್ ತಿಳಿಸಿದರು. ಮಹೇಂದ್ರಕುಮಾರ ಜೈನ್, ರಮೇಶ ಭಂಡಾರಿ, ಸುರೇಶ ಜೈನ್, ರಾಜೇಂದ್ರ ಜೈನ್ ಇದ್ದರು.

error: Content is protected !!