ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

ದಾವಣಗೆರೆ, ಆ. 26-  ಹೆಚ್.ಎ.ಎಲ್. ವತಿಯಿಂದ ಐ.ಟಿ.ಐ. (ಫಿಟ್ಟರ್, ಟರ್ನರ್, ಮೆಷಿನಿಸ್ಟ್, ಎಲೆಕ್ಟ್ರೀಷಿಯನ್, ವೆಲ್ಡರ್, ಸಿ.ಒ.ಪಿ.ಎ, ಫೌಂಡ್ರಿಮನ್ ಮತ್ತು ಶೀಟ್ ಮೆಟಲ್ ವರ್ಕರ್) ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಂದ ಅಪ್ರೆಂಟಿಸ್ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ನಾಡಿದ್ದು ದಿನಾಂಕ 28 ರೊಳಗೆ ಭರ್ತಿ ಮಾಡಿದ ಅರ್ಜಿಯನ್ನು ಕಚೇರಿಗೆ ಸಲ್ಲಿಸಬೇಕು.ಅಭ್ಯರ್ಥಿಗಳು www.apprenticeshipindia.org  ವೆಬ್‍ಸೈಟ್‍ನಲ್ಲಿ ನೋಂದಾಯಿಸಿ, ಕಡ್ಡಾಯವಾಗಿ ನೋಂದಣಿ ಸಂಖ್ಯೆಯನ್ನು ತರಬೇಕು. ವಿವರಕ್ಕೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾ ಆಡಳಿತ ಭವನ ದೂರವಾಣಿ 7406323294 ಸಂಪರ್ಕಿಸಲು ಜಿಲ್ಲಾ ಉದ್ಯೋಗಾಧಿಕಾರಿ ರವೀಂದ್ರ ಡಿ. ತಿಳಿಸಿದ್ದಾರೆ.

error: Content is protected !!