ಸ್ವದೇಶಿ ವಸ್ತು ಬಳಸಿ ದೇಶದ ಪರಂಪರೆಯನ್ನು ಜಗತ್ತಿಗೆ ಸಾರಬೇಕು

ಸ್ವದೇಶಿ ವಸ್ತು ಬಳಸಿ ದೇಶದ ಪರಂಪರೆಯನ್ನು ಜಗತ್ತಿಗೆ ಸಾರಬೇಕು

ದಾವಣಗೆರೆ, ಆ.27- ನಾವು ನಮ್ಮ ದಿನನಿತ್ಯದ ಬದುಕಿನಲ್ಲಿ ಸ್ವದೇಶಿ ವಸ್ತುಗಳನ್ನು ಬಳಸುವುದರ ಮೂಲಕ ನಮ್ಮ ದೇಶದ, ನಮ್ಮ  ಪರಂಪರೆಯ ಮಹತ್ವವನ್ನು ಇಡೀ ಜಗತ್ತಿಗೆ ಸಾರು ವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ   ಎಂದು ಸ್ವದೇಶಿ ಜಾಗರಣಾ ಮಂಚ್‌ನ ರಾಜ್ಯ ಸಂಘಟನಾ ಕಾರ್ಯದರ್ಶಿ ಜಗದೀಶ್  ಹೇಳಿದರು.

ನಗರದ ತರಳಬಾಳು ಕಾಲೇಜಿನಲ್ಲಿ ಹಮ್ಮಿ ಕೊಳ್ಳಲಾಗಿದ್ದ ಸ್ವದೇಶಿ ಜಾಗೃತಿ ಅಭಿಯಾನದಲ್ಲಿ  ವಿದ್ಯಾರ್ಥಿಗಳಿಗೆ `ಸ್ವಾವಲಂಬಿ ಭಾರತ’ ವಿಷಯ ಕುರಿತು ಅವರು ಮಾತನಾಡಿದರು.

ನಾವು ತಯಾರಿಸುವ ಉತ್ಪನ್ನಗಳು ಉತ್ತಮ ಗುಣಮಟ್ಟವನ್ನು ಹೊಂದಿದ್ದು, ವಿದೇಶೀ ವಸ್ತುಗಳನ್ನು ತ್ಯಜಿಸಿ, ಸ್ವದೇಶಿ ವಸ್ತುಗಳನ್ನು ಬಳಸುವುದು ಅತೀ ಮುಖ್ಯವಾಗಿದೆ. ಕನ್ನಡ ನಾಡು, ನುಡಿ, ಭಾಷೆ ಇವುಗಳನ್ನು ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಪ್ರಸ್ತುತ ದಿನಗಳಲ್ಲಿ ನಮ್ಮ ಸ್ವದೇಶಿ ಆಹಾರ ಪದ್ದತಿ ಉತ್ತಮ ಆರೋಗ್ಯವನ್ನು ನೀಡುತ್ತದೆ. ನಿಸರ್ಗದಲ್ಲಿ ಸಹಜವಾಗಿ,  ಪ್ರಾಕೃತಿಕವಾಗಿ ಸಿಗುವಂತಹ ಸಂಪನ್ಮೂಲಗಳನ್ನು ಬಳಸುವುದು ಬಹಳ ಮುಖ್ಯವಾಗಿದೆ. 

ಭಾರತೀಯ ಆಯುರ್ವೇದ ಪರಂಪರೆಯ ಮಹತ್ವವನ್ನು ಪ್ರಸ್ತುತ ದಿನಗಳಲ್ಲಿ ಅರಿತು ಅವುಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡರೆ ನಾವೆಲ್ಲರೂ ದಿನನಿತ್ಯವೂ ಕಾಡುವ ಅನೇಕ ಕಾಯಿಲೆಗಳಿಂದ ಮುಕ್ತರಾಗುತ್ತೇವೆ ಎನ್ನುವಂತೆ ಸ್ವದೇಶಿ ಜಾಗೃತಿ ಮೂಡಿಸುವ ಮಾತುಗಳನ್ನು ತಮ್ಮ ಉಪನ್ಯಾಸದ ಮೂಲಕ ವಿದ್ಯಾರ್ಥಿಗಳಿಗೆ ಪ್ರಸ್ತುತಪಡಿಸಿದರು.

error: Content is protected !!