ಜಗಳೂರು, ಆ.25- ಕೇಂದ್ರ ಮೌಲ್ಯಮಾಪನ ಸಮಿತಿ ನಿರ್ದೇಶನದಂತೆ 2023-24ನೇ ಸಾಲಿಗೆ ತಾಲ್ಲೂಕು ವ್ಯಾಪ್ತಿಯಲ್ಲಿ ಸ್ಥಿರಾಸ್ತಿ ಮಾರುಕಟ್ಟೆ ದರಗಳನ್ನು ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಕಳೆದ 22ರಂದು ಸಭೆ ಸೇರಿ ಪರಿಷ್ಕರಿಸಿ, ಕರಡು ಪ್ರತಿ ಪ್ರಕಟಿಸಲಾಗಿದೆ.
ಪ್ರಸ್ತಾವಿತ ದರಗಳಿಗೆ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದ್ದು, 15 ದಿನಗಳ ಒಳಗಾಗಿ ಉಪ ನೋಂದಣಿ ಕಛೇರಿಗೆ ಸಲ್ಲಿಸಬಹುದು.