ನಗರದಲ್ಲಿ ಇಂದು ಕ್ರೀಡಾಕೂಟ

ಇದೇ ದಿನಾಂಕ 29 ರಂದು ಮೇಜರ್ ದ್ಯಾನ್‍ಚಂದ್‌ ಅವರ ಜನ್ಮ ದಿನದ ಅಂಗವಾಗಿ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತಿದ್ದು, ಸ್ಥಳೀಯ ಪ್ರಚಲಿತ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶ್ರೀಹರ್ಷ ತಿಳಿಸಿದ್ದಾರೆ. ರಸ್ತೆ ಓಟ (ಪುರುಷ-6ಕಿ.ಮೀ) (ಮಹಿಳೆ–3ಕಿ.ಮೀ) ಕ್ರೀಡೆ ಇದೇ ದಿನಾಂಕ 25 ರಂದು ಜಿಲ್ಲಾ ಕ್ರೀಡಾಂಗಣದಿಂದ ಪ್ರಾರಂಭವಾಗುತ್ತದೆ. ಬೆಳಿಗ್ಗೆ 7.30 ಗಂಟೆಗೆ ವರದಿ ಮಾಡಿಕೊಳ್ಳಬೇಕು. (ವಿನೋದ್‍ಕುಮಾರ್. ಕೆ. ಮೊ.ನಂ: 8971388143) ಹಗ್ಗ ಜಗ್ಗಾಟ ಕ್ರೀಡೆಯನ್ನು ಆಗಸ್ಟ್ 29 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದು, ಬೆಳಿಗ್ಗೆ 7.30 ಗಂಟೆಗೆ ವರದಿ ಮಾಡಿಕೊಳ್ಳಬೇಕು. (ರಾಮಲಿಂಗಪ್ಪ. ಜೆ. ಮೊ.ನಂ: 9480796263)

ಖೋ-ಖೋ ಕ್ರೀಡೆಯನ್ನು ಆಗಸ್ಟ್ 29 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದು, ಬೆಳಿಗ್ಗೆ 9.30 ಗಂಟೆಗೆ ವರದಿ ಮಾಡಿಕೊಳ್ಳಬೇಕು (ಸುನೀತಾ ಎಂ.ಸಿ. ಮೊ.ನಂ: 9972464313)

error: Content is protected !!