ಜೆಜೆಎಂ ವೈದ್ಯ ಕಾಲೇಜಿಗೆ ಬಹುಮಾನ

ಜೆಜೆಎಂ ವೈದ್ಯ ಕಾಲೇಜಿಗೆ ಬಹುಮಾನ

ದಾವಣಗೆರೆ, ಆ.24- ನಗರದ ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಬೆಳಗಾವಿ ವಲಯ ಆಯೋಜಿಸಿದ 2023 – 24ನೇ ಸಾಲಿನ ಚೆಸ್ ಪಂದ್ಯಾವಳಿಯ ಪುರುಷರ ವಿಭಾಗದಲ್ಲಿ ಹುಬ್ಬಳ್ಳಿಯ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್‌ ಮೆಡಿಕಲ್ ಸೈನ್ಸ್ ಕಾಲೇಜು ಮೊದಲ ಬಹುಮಾನ ಪಡೆದುಕೊಂಡರೆ, ಬಳ್ಳಾರಿಯ ಸರ್ಕಾರಿ ದಂತ ವೈದ್ಯಕೀಯ ಕಾಲೇಜು ದ್ವಿತೀಯ ಬಹುಮಾನ ಪಡೆದುಕೊಂಡಿತು. 

ಮಹಿಳೆಯರ ವಿಭಾಗದಲ್ಲಿ ನಗರದ ಜೆಜೆಎಂ ಮೆಡಿಕಲ್ ಕಾಲೇಜು ಪ್ರಥಮ ಬಹುಮಾನ ಪಡೆದುಕೊಂಡರೆ, ಕಾರವಾರ ಇನ್‌ಸ್ಟಿಟ್ಯೂಟ್ ಆಫ್‌ ಮೆಡಿಕಲ್ ಸೈನ್ಸ್‌ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.

ಜೆಜೆಎಂ ವೈದ್ಯ ಕಾಲೇಜಿಗೆ ಬಹುಮಾನ - Janathavani

ಈ ಸಂದರ್ಭದಲ್ಲಿ ವಿಜೇತರಿಗೆ ಜೆಜೆಎಂ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಬಿ.ಮುರುಗೇಶ್‌ ಅವರು ಬಹುಮಾನ ವಿತರಿಸಿ, ವಿಜೇತರಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ ಡಾ.ನರೇಂದ್ರನಾಥ್, ಡಾ.ಸಂತೋಷಕುಮಾರ್‌, ಡಾ.ಅಶ್ವಿನಿ, ಡಾ.ನೀತು, ಆರ್ಬಿಟರ್ ನವೀನ್, ರಾಜೀವ್ ಗಾಂಧಿ ವಿವಿಯ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಅಧ್ಯಕ್ಷ ಡಾ.ಜೋಸೆಫ್‌ ಅನಿಲ್, ರಾಜೀವ್‌ಗಾಂಧಿ ಯೂನಿವರ್ಸಿಟಿ ಬೆಳಗಾವಿ ವಲಯದ ಕೋ ಆರ್ಡಿನೇಟರ್ ಸಿ.ಪಿ.ಮಹೇಶ್, ಜಿ.ಎಂ.ಫಾರ್ಮಸಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಹನುಮಂತಪ್ಪ, ಜೆಜೆಎಂ ಮೆಡಿಕಲ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಕೆ.ಎನ್.ಗೋಪಾಲಕೃಷ್ಣ, ಶಾಂತಕುಮಾರ್ ಇತರರು ಇದ್ದರು.

error: Content is protected !!