ಮಲೇಬೆನ್ನೂರಿನಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಮಲೇಬೆನ್ನೂರಿನಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಮಲೇಬೆನ್ನೂರು,  ಆ. 23- ಇಸ್ರೋ ವತಿಯಿಂದ ಕೈಗೊಳ್ಳಲಾಗಿದ್ದ ದೇಶದ ಹೆಮ್ಮೆಯ  ಚಂದ್ರಯಾನ-3 ಉಪಗ್ರಹವು ಚಂದ್ರನ ಮೇಲೆ ಯಶಸ್ವಿಯಾಗಿ ಲ್ಯಾಂಡಿಂಗ್ ಆದ ನೇರ ಪ್ರಸಾರ ವೀಕ್ಷಿಸಿದ ಯುವಕರು ಪಟ್ಟಣದ ಮುಖ್ಯ ವೃತ್ತದಲ್ಲಿ ಮತ್ತು ನೀರಾವರಿ ಇಲಾಖೆಯ ಕಛೇರಿ ಮುಂಭಾಗದಲ್ಲಿ  ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.  ಪ್ರಪಂಚದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಚಂದ್ರನ ದಕ್ಷಿಣ ಧ್ರುವಕ್ಕೆ ಕಾಲಿಟ್ಟ ವಿಕ್ರಂ ಲ್ಯಾಂಡರ್ ಭಾರತದ ಹಿರಿಮೆಯನ್ನು ಹೆಚ್ಚಿಸಿದೆ ಎಂದು ಪಟ್ಟಣದ ಯುವಕರು ಖುಷಿ ಪಟ್ಟರು. 

ಪುರಸಭೆ ಸದಸ್ಯ ಬೆಣ್ಣೆಹಳ್ಳಿ ಸಿದ್ದೇಶ್, ಮುಖಂಡರಾದ ಕೆ.ಜಿ. ಪರಮೇಶ್ವರಪ್ಪ,  ಎಸ್. ಕರಿಬಸಪ್ಪ, ಪಾನಿಪುರಿ ರಂಗನಾಥ್, ಬಸ್ ಏಜೆಂಟ್ ಪುಟ್ಟಣ್ಣ, ದೊರೆ, ಪಿ ಆರ್ ರಾಜು, ಎ. ಕೆ. ಲೋಕೇಶ್, ಜಿ.ಪಿ. ಹನುಮಗೌಡ, ಮೆಡಿಕಲ್ ಶಾಪ್ ನಂದಿಗಾವಿ ರಾಜೀವ್, ತರಕಾರಿ ಅಂಗಡಿ ರಾಜು ಸೇರಿದಂತೆ ಮಲೇಬೆನ್ನೂರು ಮತ್ತು ಸುತ್ತಮುತ್ತಲಿನ ಹಳ್ಳಿಗಳ ಯುವಕರು, ಗ್ರಾಮಸ್ಥರು ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು.

error: Content is protected !!