ಚಂದ್ರಯಾನ : ಡಿ.ಬಿ. ಸಂತಸ

ದಾವಣಗೆರೆ, ಆ. 23- ಭಾರತೀಯರ ಪಾಲಿಗೆ ಇಂದು ಹೆಮ್ಮೆಯ ದಿನ, ಐತಿಹಾಸಿಕ ಕ್ಷಣವಾಗಿತ್ತು. ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಅಂಗಳಕ್ಕೆ ಇಳಿದಿದ್ದು, ಅತೀವ ಸಂತಸ ತಂದಿದೆ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ತಿಳಿಸಿದ್ದಾರೆ.

ಇಸ್ರೋ ವಿಜ್ಞಾನಿಗಳ ಪರಿಶ್ರಮಕ್ಕೆ 140 ಕೋಟಿ ಭಾರತೀಯರ ಪ್ರಾರ್ಥನೆ ಫಲಿಸಿದೆ. ಭಾರತವು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶವಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳಿಗೆ, ಇಸ್ರೋ ಸಂಸ್ಥೆಗೆ ಅವರ ಪರಿಶ್ರಮಕ್ಕೆ ಕೋಟಿ ಕೋಟಿ ನಮನಗಳನ್ನು ಹೇಳಿದ್ದಾರೆ.

ನಮ್ಮ ದೇಶದ ವಿಜ್ಞಾನದ ಸಾಧನೆಗಳ ಗೌರವಕ್ಕೆ ವಿಜ್ಞಾನಿಗಳು ಮಾತ್ರ ಪಾತ್ರರು. ಇದರ ಯಶಸ್ಸಿನ ಕೀರ್ತಿ ಅವರಿಗೆ ಮಾತ್ರ ಸಲ್ಲಬೇಕು. ಯಾವುದೇ ರಾಜಕೀಯ ನಾಯಕರು ರಾಜಕೀಯ ಲಾಭ ಪಡೆೆಯಬಾರದು ಎಂದು ಬಸವರಾಜ್ ಪರೋಕ್ಷವಾಗಿ ಬಿಜೆಪಿಗೆ ಚುಚ್ಚಿದ್ದಾರೆ. 

error: Content is protected !!