ಚಂದ್ರಯಾನ-3 : ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ ಡಾ. ಬಿ.ಇ. ರಂಗಸ್ವಾಮಿ

ಚಂದ್ರಯಾನ-3 : ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ ಡಾ. ಬಿ.ಇ. ರಂಗಸ್ವಾಮಿ

ದಾವಣಗೆರೆ, ಆ.23-  ಭಾರತದ ವಿಕ್ರಂ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಸುರಕ್ಷಿತವಾಗಿ ಹೆಜ್ಜೆ ಇಟ್ಟ ಘಳಿಗೆಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಬಿ.ಇ. ರಂಗಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ. 

ಬುಧವಾರ ಭಾರತದ ಇತಿಹಾಸದಲ್ಲಿಯೇ ಒಂದು ಸುವರ್ಣ ದಿನ. ಚಂದ್ರನನ್ನು ಸ್ಪರ್ಶಿಸಿದ ಭಾರತ ದಕ್ಷಿಣ ಧ್ರುವದಲ್ಲಿ ಚಂದ್ರನ ಅಂಗಳದಲ್ಲಿ  ಇಳಿದ ವಿಕ್ರಮ್ ಲ್ಯಾಂಡರ್. ಇಸ್ರೋ ಸಾಧನೆಗೆ ಇಡೀ ವಿಶ್ವವೇ ಬೆರಗುಗೊಂಡಿದೆ ಎಂದು ಅವರು ತಿಳಿಸಿದ್ದಾರೆ. 

ಭಾರತದ ಇಸ್ರೋ ವಿಜ್ಞಾನಿಗಳು ಚಂದ್ರನ ಮೇಲೆ ಭಾರತದ ಹೆಗ್ಗುರುತು  ಮೂಡಿಸಿದ್ದಾರೆ. ಇಂತಹ ಮಹೋನ್ನತ ಸಾಧನೆ ಮಾಡಿದ ವಿಜ್ಞಾನಿಗಳನ್ನು ರಂಗಸ್ವಾಮಿ ಅಭಿನಂದಿಸಿದ್ದಾರೆ.

error: Content is protected !!