ದಾವಣಗೆರೆ,ಆ.22- ಕದಳಿ ಮಹಿಳಾ ವೇದಿಕೆ ತಾಲ್ಲೂಕು ಘಟಕದಿಂದ 146ನೇ `ಕದಳಿ ಕಮ್ಮಟ’ ಹಮ್ಮಿಕೊಳ್ಳಲಾಗಿತ್ತು.
ಕಮ್ಮಟದಲ್ಲಿ ದತ್ತಿ ಉಪನ್ಯಾಸ, ಸ್ವಾತಂತ್ರ್ಯ ದಿನಾಚರಣೆ, ಅಕ್ಕ ನಾಗಮ್ಮ ಜಯಂತಿ ಹಾಗು ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮ ವನ್ನು ಸಮೀಪದ ನಾಗನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿತ್ತು.
ಕದಳಿ ಮಹಿಳಾ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷೆ ಗಾಯತ್ರಿ ವಸ್ತ್ರದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ಕೆ.ಸೋಮಶೇಖರಪ್ಪ ಕೆಇಎಸ್ ಇವರು ಮುಖ್ಯ ಅತಿಥಿಗಳಾಗಿದ್ದರು.
ದಾವಣಗೆರೆ ರಾಜಶೇಖರಯ್ಯ ಮತ್ತು ಆರ್. ದಯಾನಂದ್ ದತ್ತಿ ದಾನಿಗಳು ಶ್ರೀಮತಿ ಪಂಕಜ ದಯಾನಂದ್, ಲಿಂಗೈಕ್ಯ ಸಿದ್ದಮ್ಮ ಮತ್ತು ಲಿಂಗೈಕ್ಯ ಚೆನ್ನಬಸಪ್ಪ ಸ್ಮರಣಾರ್ಥ ದತ್ತಿ, ದಾನಿಗಳು- ಶ್ರೀಮತಿ ರಾಜೇಶ್ವರಿ ಮತ್ತು ಎ.ಸಿ ಜಯಣ್ಣ ದಾವಣಗೆರೆ. ಲಿಂಗೈಕ್ಯ ಗೌರಮ್ಮ ಮತ್ತು ವೀರಭದ್ರಯ್ಯ ಹಂಜಗಿ ಮಠ ದತ್ತಿ , ದಾನಿಗಳು- ಮಹಾರುದ್ರಯ್ಯ ಇವರುಗಳ ದತ್ತಿ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು.
ದತ್ತಿ ಉಪನ್ಯಾಸಕರಾಗಿ ಪೂರ್ಣಿಮಾ ಎಲ್.ಬಸವರಾಜ್ ಆಗಮಿಸಿ `ಉತ್ತಮ ಸಮಾಜಕ್ಕಾಗಿ ಮಕ್ಕಳಿಗೆ ನೈತಿಕ ಶಿಕ್ಷಣ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸೋಮ ಶೇಖರಪ್ಪನವರು ಮಕ್ಕಳಲ್ಲಿ ಆತ್ಮವಿಶ್ವಾಸ, ಸ್ಪೂರ್ತಿಯನ್ನು ತುಂಬುವಂತಹ ಮಾತುಗಳನ್ನು ಆಡಿದರು. ದತ್ತಿ ದಾನಿಗಳಲ್ಲೊಬ್ಬರಾದ ಶ್ರೀಮತಿ ಪಂಕಜ ದಯಾನಂದ್, ಕದಳಿ ವೇದಿಕೆ ಪೂರ್ವಾಧ್ಯಕ್ಷರಾದ ಶ್ರೀಮತಿ ಕುಸುಮ ಲೋಕೇಶ್ ಮಾತನಾಡಿದರು.
ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷರಾದ ವಿನೋದ ಅಜಗಣ್ಣನವರ್, ನಿರ್ದೇಶಕರಾದ ಆಶಾ ಮಹಾಬಲೇಶ್, ಶಾಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಸಂತ ಕೆ.ಆರ್ ಕಾರ್ಯಕ್ರಮ ನಿರೂಪಿಸಿ ದರು. ನಂದಿನಿ ಗಂಗಾಧರ್ ಸ್ವಾಗತಿಸಿದರು. ವಿಜಯ ಚಂದ್ರ ಶೇಖರ್ ಉಪನ್ಯಾಸಕರನ್ನು ಪರಿಚಯಿಸಿದರು. ಲಕ್ಷ್ಮಿ ಗಂಗಾಧರ್ ದತ್ತಿ ಮತ್ತು ದಾನಿಗಳನ್ನು ಪರಿಚಯಿಸಿದರು. ಪೂರ್ಣಿಮಾ ಪ್ರಸನ್ನ ವಂದಿಸಿದರು.