ಮಲೇಬೆನ್ನೂರು, ಆ.22- ಕುಂಬಳೂರು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದೇವರಬೆಳಕೆರೆ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾ ಕೂಟವನ್ನು ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಶ್ರೀಮತಿ ಉಮಾದೇವಿ ಎಂ.ಹೆಚ್. ಶಿವರಾಮಚಂದ್ರಪ್ಪ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ನಾನು ಈ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದು, ಗ್ರಾ.ಪಂ. ಅಧ್ಯಕ್ಷೆಯಾಗಿ ಈ ಕ್ರೀಡಾಕೂಟಕ್ಕೆ ಚಾಲನೆ ನೀಡಿರುವುದು ಸಂತಸ ತಂದಿದೆ. ಕ್ರೀಡೆಯಲ್ಲಿ ಯಾವುದೇ ತಾರತಮ್ಯ ಮಾಡದೇ ತೀರ್ಪುಗಾರರು ಸರಿಯಾದ ತೀರ್ಪು ನೀಡಬೇಕೆಂದು ಮನವಿ ಮಾಡಿದರು.
ಗ್ರಾ.ಪಂ. ಉಪಾಧ್ಯಕ್ಷ ನಾಗೋಳ್ ಕಲ್ಲೇಶ್ ಮಾತನಾಡಿ, ಮಕ್ಕಳಲ್ಲಿ ದೈಹಿಕ ಶಕ್ತಿ ಹೆಚ್ಚಿಸಲು ಕ್ರೀಡೆ ಸಹಕಾರಿಯಾಗಿದ್ದು, ಮಕ್ಕಳು ಶಿಕ್ಷಣದ ಜೊತೆಗೆ ಕ್ರೀಡೆಗೆ ಒತ್ತು ನೀಡಬೇಕೆಂದರು.
ಪ್ರಭಾರ ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಶ್ರೀಮತಿ ಮಂಜುಳಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಂಬಳೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಅಧ್ಯಕ್ಷ ಎಂ.ಹೆಚ್. ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜಿನ ಎಸ್‌ಬಿಸಿ ಉಪಾಧ್ಯಕ್ಷ ಹರ್ಷ, ಮಾಜಿ ಉಪಾಧ್ಯಕ್ಷ ವೈ. ಶ್ರೀನಿವಾಸ್, ಕಾಲೇಜಿನ ಪ್ರಾಚಾರ್ಯ ರಂಗನಾಥ್, ಪ್ರೌಢಶಾಲಾ ಮುಖ್ಯಶಿಕ್ಷಕ ಗೋವಿಂದಪ್ಪ, ನಂದಿತಾವರೆ ಬಸವೇಶ್ವರ ಪ್ರೌಢಶಾಲೆಯ ಪದ್ದಪ್ಪ, ಮಲೇಬೆನ್ನೂರಿನ ಉರ್ದು ಶಾಲೆಯ ರೇವಣಸಿದ್ದಪ್ಪ ಅಂಗಡಿ, ಜಾಮಿಯಾ ಶಾಲೆಯ ಮಹಮದ್ ಇಲಿಯಾಸ್, ಬಸವ ಗುರುಕುಲ ಶಾಲೆಯ ಗುಂಡಣ್ಣನವರ್, ಹಾಲಿವಾಣ ಪ್ರೌಢಶಾಲೆಯ ಎಸ್.ಹನುಮಂತಪ್ಪ, ಜಿಗಳಿ ಶಾಲೆಯ ಮಾಜಿ ಅಧ್ಯಕ್ಷ ಕೆ.ಎಸ್. ಮಾಲತೇಶ್, ದೈಹಿಕ ಶಿಕ್ಷಕರಾದ ಹಾಲಪ್ಪ, ಚಂದ್ರು, ಭೀಮಪ್ಪ, ಕುಮಾರಸ್ವಾಮಿ, ಮಾರುತಿ, ಶ್ರೀನಿವಾಸ್ ರೆಡ್ಡಿ ಮತ್ತಿತರು ಭಾಗವಹಿಸಿ ಈ ವೇಳೆ ಹಾಜರಿದ್ದರು.