ರಾಣೇಬೆನ್ನೂರು ತಾಲ್ಲೂಕಿನ ಕುಮದ್ವತಿ ನದಿ ತೀರದ ಸುಕ್ಷೇತ್ರ ನಂದಿಹಳ್ಳಿಯಲ್ಲಿ ಶ್ರೀ ನಂದಿಹಳ್ಳಿ ಬಸ ವೇಶ್ವರ ದೇವಸ್ಥಾನ ಸಮಿತಿ ವತಿ ಯಿಂದ 34 ನೇ ವರ್ಷದ ಶ್ರಾವಣ ಮಾಸದ ರುದ್ರಾಭಿಷೇಕ ಪೂಜಾ ಕಾರ್ಯಕ್ರಮವು ಮೊನ್ನೆ ಆರಂಭ ಗೊಂಡಿದ್ದು, ಬರುವ ಸೆಪ್ಟೆಂಬರ್ 15 ರವರೆಗೆ ನಡೆಯಲಿದೆ. ಪ್ರತಿ ನಿತ್ಯ ಪ್ರಾತಃ ಕಾಲ 4 ಕ್ಕೆ ಮಹಾರುದ್ರಾಭಿ ಷೇಕ ಪೂಜೆ, 108 ಬಿಲ್ವಾರ್ಚನೆಯು ರಾಣೇಬೆನ್ನೂರು ರಾಚಯ್ಯ ಶಾಸ್ತ್ರಿ ಗಳಿಂದ ನೆರವೇರಲಿದೆ. ಸೆಪ್ಟೆಂಬರ್ 15 ರಂದು ಶ್ರಾವಣ ಮಾಸದ ರುದ್ರಾಭಿಷೇಕದ ಮುಕ್ತಾಯ ಪೂಜೆ, ಸಹಸ್ರ ಬಿಲ್ವಾರ್ಚನೆ, ತೀರ್ಥಪ್ರಸಾದ, ಮಹಾ ಮಂಗಳಾರತಿ, ಜಂಗಮ ತೃಪ್ತಿ, ಮಹಾಗಣಾರಾಧನೆ, ಅನ್ನ ಸಂತರ್ಪನೆ ಜರುಗಲಿವೆ. ಶ್ರಾವಣ ಮಾಸದ ಪೂಜೆಗೆ ಬರುವ ಭಕ್ತರಿಗೆ ದೇವಸ್ಥಾನದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾ ಗಿದೆ. ಮಾಹಿತಿಗಾಗಿ ದೇವಸ್ಥಾನ ಸಮಿತಿ ಕಾರ್ಯದರ್ಶಿ 94485-04420, 99457-12774 ಗೆ ಸಂಪರ್ಕಿಸಬಹುದು.
December 27, 2024