ನ್ಯಾಮತಿ, ಆ. 13 – ನ್ಯಾಮತಿ ತಾಲ್ಲೂಕು ಗೋವಿನಕೋವಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ದಾನೇಶ್, ಉಪಾಧ್ಯಕ್ಷರಾಗಿ ಎಚ್.ಎಂ.ಶಶಿಕಲಾ ಅವಿರೋಧವಾಗಿ ಆಯ್ಕೆಯಾದರು. ಪಂಚಾಯಿತಿ ಸದಸ್ಯ ರಾದ ಶಿಲ್ಪಾ, ಜಿ.ಎಚ್.ಶ್ವೇತಾ, ಎಚ್.ಎ.ಸಿದ್ದೇಶಪ್ಪ, ಎ.ಕೆ.ನರಸಿಂಹಪ್ಪ, ಮಹೇಶ್ವರಪ್ಪ, ನರಸಿಂಹಪ್ಪ, ಸುನೀತ, ಮಂಜಾನಾಯ್ಕ, ಲಕ್ಷ್ಯಪ್ಪ, ಪಿಡಿಒ ಸತೀಶ್ ಕುಮಾರ, ಕಾರ್ಯದರ್ಶಿ ಕೆ.ಮಂಜುಳಾ ಇತರರು ಇದ್ದರು.
January 12, 2025